Composer : Shri Purandara dasaru
ರಾಮ ರಾಮ ರಾಮ ಎನ್ನಿರೋ, ಇಂಥಾ
ಸ್ವಾಮಿಯ ನಾಮವ ಮರೆಯದಿರೊ ||ಪ ||
ತುಂಬಿದ ಪಟ್ಟಣಕ್ಕೆ ಒಂಭತ್ತು ಭಾಗಿಲು
ಸಂಭ್ರಮದರಸರು ಐದು ಮಂದಿ
ಡಂಭಕತನದಿಂದ ಕಾಯುವ ಜೀವವ
ನಂಬಿ ನೆಚ್ಚಿ ನೀವು ಕೆಡಬೇಡಿರೊ |೧|
ನೆಲೆ ಇಲ್ಲದೀಕಾಯ ಎಲುವಿನ ಹಂದರ
ಬಲಿದು ಸುತ್ತಿದ ಚರ್ಮದ ಹೊದಿಕೆ
ಮಲ ಮೂತ್ರಂಗಳು ಕೀವು ಕ್ರಿಮಿಗಳುಳ್ಳ
ಹೊಲಸು ತೊಗಲ ಮೆಚ್ಚಿ ಕೆಡಬೇಡಿರೊ |೨|
ಹರ ಬ್ರಹ್ಮ ಸುರರಿಂದ ವಂದ್ಯನು ಆಗಿಪ್ಪ
ಹರಿ ಸರ್ವೋತ್ತಮ ಕಾಣಿರೋ
ಪುರಂದರವಿಠಲನ ಭಜನೇಯ ಮಾಡಿರೊ
ದುರಿತ ಭಯಗಳಿಂದ ದೂರಾಗಿರೊ |೩|
rAma rAma rAma ennirO, iMthA
svAmiya nAmava mareyadiro ||pa ||
tuMbida paTTaNakke oMBattu BAgilu
saMBramadarasaru aidu maMdi
DaMBakatanadiMda kAyuva jIvava
naMbi necci nIvu keDabEDiro |1|
nele illadIkAya eluvina haMdara
balidu suttida carmada hodike
mala mUtraMgaLu kIvu krimigaLuLLa
holasu togala mecci keDabEDiro |2|
hara brahma surariMda vaMdyanu Agippa
hari sarvOttama kANirO
puraMdaraviThalana bhajanEya mADiro
durita BayagaLiMda dUrAgiro |3|
Leave a Reply