Composer : Shri Vijayadasaru
ಇಂಥಾ ಪ್ರಭುವ ಕಾಣೆನೋ ಈಜಗದೊಳ-
ಗಿಂಥಾ ಪ್ರಭುವ ಕಾಣೆನೋ ||ಪ||
ಇಂಥಾ ಪ್ರಭುವ ಕಾಣೆ ಶಾಂತ ಮೂರುತಿ ಜಗ-
ದಂತರಂಗನು ಲಕ್ಷ್ಮೀಕಾಂತ ಸರ್ವಾಂತರ್ಯಾಮಿ ||ಅ.ಪ||
ಬೇಡಿದಿಷ್ಟವ ಕೊಡುವ-ಭಕ್ತರ ತಪ್ಪು
ನೋಡದೆ ಬಂದು ಪೊರೆವ
ಗಾಡಿಕಾರನು ಗರುಡಾ
ರೂಢ್ಯ ಗುಣವಂತ ಮಹಾ
ಪ್ರೌಢ ಪ್ರತಾಪಿ ಜಗದಿ
ಗೂಢದಿಂ ಸಂಚರಿಪ
ಪಾಡಿ ಪೊಗಳಿ ಕೊಂಡಾಡುವವರ ಮುಂ-
ದಾಡುತಲಿಪ್ಪನು ನಾಡೊಳಗಿದ್ದರು
ಕೇಡಿಗನೇ ನಾಡಾಡಿಗಳಂದದಿ
ಈಡುಂಟೇನೋ ಈ ವೆಂಕಟಗೆ ||೧||
ನಿಗಮ ತತಿಗಳರಿಯದ- ನೀರಜಭವಾ-
ದ್ಯಗಣಿತ ಸುರರು ಕಾಣದ
ಜಗದೊಡೆಯನು ಭಕ್ತ-
ರುಗಳಿಗೊಲಿದು ತ್ರಿಸ್ಥಾ-
ನಗಳತ್ಯಜಿಸಿ ಕಲಿ
ಯುಗದಿ ಭೂಮಿಗೆ ಬಂದ
ಅಗಣಿತ ಸುಗುಣಾರ್ಣವ- ಶ್ರೀ ಹರಿಯೇ
ಜಗದೊಳು ಸೇವಾದಿಗಳನು ಕೊಳುತಿಹ
ಅಘಹರ ಮೋಕ್ಷಾದಿಗಳನೆ ನೀಡುತ
ನಗೆಮೊಗದಲಿ ಚನ್ನಿಗನಿಂತಹನೊ ||೨||
ಭಾರ್ಗವಿ ಭೂಮಿವಲ್ಲಭ ಭವದೂರ ಭಕ್ತ
ವರ್ಗಕೆ ಇವಸುಲಭ
ನಿರ್ಗುಣ ನಿರ್ವಿಕಾರ-
ಸ್ವರ್ಗದೈಶ್ವರ್ಯದಿಂದಾ-
ನಘ್ರ್ಯದ ಪದವನೀವ
ದೀರ್ಘಾಯುವಂತನೀತ
ಭಾರ್ಗವರಾಮ ನೃಪರ್ಗಳನೆಲ್ಲರ
ಣಾಗ್ರದಿ ಜಯಿಸಿದ ಉಗ್ರಪ್ರತಾಪಿ
ಅಗ್ರಗಣ್ಯ ಸದ್ವಿಗ್ರಹ ಶ್ರೀಮದ
ನುಗ್ರಹ ಮಾಡುತ ದುರ್ಗುಣ ಕಳೆವ ||೩||
ನಿರ್ದುಃಖಾನಂದ ಭರಿತಾ ನಿರ್ವಾಣ ಸುಖಕೆ
ಆರ್ದ್ರಹೃದಯ ತೋರುತ
ನಿದ್ರೆಯೊಳಿದ್ದವಗು
ಪದ್ರಬಡಿಸಿ ದೈತ್ಯ
ಕ್ಷುದ್ರನಂಕೊಲಿಸಿ ಸು
ಭದ್ರ ಜಗಕೆ ಇತ್ತ
ನಿರ್ದಯನಲ್ಲ ಸಮುದ್ರಶಯನ ಗೋ-
ವರ್ಧನ ಗಿರಿಯನು ಉದ್ಧರಿಸಿದ ಯದು
ವರ್ಧನ ದನುಜ ವಿಮರ್ದನ ಲಕ್ಷ್ಮೀ ಜ
ನಾರ್ದನ ವರ ಶೇಷಾದ್ರಿ ನಿವಾಸ ||೪||
ವಾರಿಜಾಸನ ಮನೋಜಾ ಈರ್ವರು ಸುತರು
ಸುರತರಂಗಿಣಿ ತನುಜೇ
ಪುರವೇ ವೈಕುಂಠ ಇಂದ್ರಾದ್ಯ
ಮರರೆ ಕಿಂಕರರು
ಗರುಡವಾಹನ ಉರಗ
ಪರಿಯಂಕ ನಿಷ್ಕಳಂಕ
ಸರಿದೊರೆಗಳ ನಾನರಿಯೆನು ವೆಂಕಟ
ಗಿರಿಯಲಿ ಇರುತಿಹ ಕರುಣಿಗಳರಸನೆ
ಮರೆಯದೆ ಸಲಹೋ ಶರಣಾಗತರನು
ಮರುತಾಂತರ್ಗತ ಸಿರಿ ವಿಜಯವಿಠಲಾ ||೫||
iMthA praBuva kANenO IjagadoLa-
giMthA praBuva kANenO ||pa||
iMthA praBuva kANe SAMta mUruti jaga-
daMtaraMganu lakShmIkAMta sarvAMtaryAmi ||a.pa||
bEDidiShTava koDuva-Baktara tappu
nODade baMdu poreva
gADikAranu garuDA –
rUDhya guNavaMta mahA
prauDha pratApi jagadi
gUDhadiM saMcaripa
pADi pogaLi koMDADuvavara muM-
dADutalippanu nADoLagiddaru
kEDiganE nADADigaLaMdadi
IDuMTEnO I veMkaTage ||1||
nigama tatigaLariyada- nIrajaBavA-
dyagaNita suraru kANada
jagadoDeyanu Bakta-
rugaLigolidu tristhA-
nagaLatyajisi kali
yugadi BUmige baMda
agaNita suguNArNava- SrI hariyE
jagadoLu sEvAdigaLanu koLutiha
aGahara mOkShAdigaLane nIDuta
nagemogadali canniganiMtahano ||2||
BArgavi BUmivallaBa – BavadUra Bakta
vargake ivasulaBa
nirguNa nirvikAra-
svargadaiSvaryadiMdA-
naGryada padavanIva
dIrGAyuvaMtanIta
BArgavarAma nRupargaLanellara –
NAgradi jayisida ugrapratApi
agragaNya sadvigraha SrImada –
nugraha mADuta durguNa kaLeva ||3||
nirduHKAnaMda BaritA – nirvANa suKake
ArdrahRudaya tOruta
nidreyoLiddavagu –
padrabaDisi daitya
kShudranaMkolisi su
Badra jagake itta
nirdayanalla samudraSayana gO-
vardhana giriyanu uddharisida yadu
vardhana danuja vimardana lakShmI ja –
nArdana vara SEShAdri nivAsa ||4||
vArijAsana manOjA Irvaru sutaru
surataraMgiNi tanujE
puravE vaikuMTha iMdrAdya
marare kiMkararu
garuDavAhana uraga
pariyaMka niShkaLaMka
saridoregaLa nAnariyenu veMkaTa
giriyali irutiha karuNigaLarasane
mareyade salahO SaraNAgataranu
marutAMtargata siri vijayaviThalA ||5||
Leave a Reply