Composer : Shri Vijayadasaru
ಭಕ್ತಜನ ಪಾಲಕಾ, ಭಕ್ತಿ ಸುಖ ದಾಯಕಾ,
ಮುಕ್ತೇಶ ದೀನಬಂಧೋ, ಕೃಷ್ಣಾ |
ಯುಕ್ತಿಯಲಿ ನಿನಂಥ ದೇವರನು ನಾ ಕಾಣೇ,
ಸತ್ಯವತೀಸುತನೇ ಕಾಯೋ, ಕೃಷ್ಣಾ |ಅ.ಪ|
ಕೆಟ್ಟ ಜನರ ಸಂಗ ಇಷ್ಟು ದಿನವೂ ಮಾಡಿ,
ಭ್ರಷ್ಟನಾಗಿ ಪೋದೇನೋ,ಕೃಷ್ಣಾ |
ಬೆಟ್ಟದೊಡೆಯನೆ ನಿನ್ನ ಮುಟ್ಟಿ ಭಜಿಸುವ ಭಾಗ್ಯ,
ಇಷ್ಟಗಳ ಎಮಗೆ ಕೊಡಿಸೋ, ಕೃಷ್ಣಾ |೧|
ಆನಂದತೀರ್ಥ ಮುನಿಯ ಧ್ಯಾನಿಪರ ಸಂಗ,
ಆನಂದದಲಿ ನಿಲ್ಲಿಸೋ, ಕೃಷ್ಣಾ|
ದೀನಜನ ಮಂದಾರ ನೀನೆಂದು ನಂಬಿದೆನೋ,
ಸಾನುರಾಗದಲಿ ಕಾಯೋ, ಕೃಷ್ಣಾ |೨|
ಅಜ ಜನಕ ಗಜ ವರದಾ, ಭುಜಗಶಯನನೇ ನಿನ್ನ,
ಭಜಿಪ ಭಾಗ್ಯವನೆ ಕೊಡಿಸೋ, ಕೃಷ್ಣಾ |
ನಿಜವಾಗಿ ನಿನ್ಹೊರೆತು ಸಲಹುವರ ನಾ ಕಾಣೆ,
ವಿಜಯವಿಠ್ಠಲರೇಯನೇ, ಕೃಷ್ಣಾ |೩|
bhaktajana pAlakA, bhakti sukha dAyakA,
muktEsha dInabaMdhO, kRuShNA |
yuktiyali ninaMtha dEvaranu nA kANE,
satyavatIsutanE kAyO, kRuShNA |a.pa|
keTTa janara saMga iShTu dinavU mADi,
bhraShTanAgi pOdEnO,kRuShNA |
beTTadoDeyane ninna muTTi bhajisuva bhAgya,
iShTagaLa emage koDisO, kRuShNA |1|
AnaMdatIrtha muniya dhyAnipara saMga,
AnaMdadali nillisO, kRuShNA|
dInajana maMdAra nIneMdu naMbidenO,
sAnurAgadali kAyO, kRuShNA |2|
aja janaka gaja varadA, bhujagashayananE ninna,
bhajipa bhAgyavane koDisO, kRuShNA |
nijavAgi ninhoretu salahuvara nA kANe,
vijayaviThThalarEyanE, kRuShNA |3|
Leave a Reply