Composer : Shri Indiresha ankita
ಬಾರೆ ವೆಂಕಟರಮಣಿ ಶ್ರೀ ಶ್ರೀದೇವಿ
ಬಾರೆ ವೆಂಕಟರಮಣಿ ||ಪ||
ಬಾರೆ ವೆಂಕಟರಮಣಿ ಪಾರಾಯಣ ಕೇಳೆ
ಚಾರು ವದನೆ ಉಪಹಾರ ಕಾಲಕ್ಕೆ ನಿತ್ಯ ||ಅ.ಪ||
ಏನು ಪುಣ್ಯವೆ ನಂದು ಪಾರಾಯಣ
ನೀನೆ ಕೇಳುವಿ ಬಂದು |
ಹೀನ ಮಾನವನಿಗೆ ನೀನು ಬರುವಿ ಎಂಬೊ
ಜ್ಞಾನವಿಲ್ಲದೆ ಉಚ್ಚ ಸ್ಥಾನದೊಳಗೆ ಕೂಡೆ |೧|
ಸ್ವಪ್ನದೊಳಗೆ ಬರುವಿ ಶ್ರೀ ಶ್ರೀದೇವಿ
ಕ್ಷಿಪ್ರ ತನದಿ ಪೋಗುವಿ |
ಸರ್ಪಶಯನ ನಮ್ಮಪ್ಪ ಗೋಕುಲ ಬಾಲ
ನಪ್ಪಿಕೊಂಬುವ ಸುಖ ಒಪ್ಪಿಸೆ ಬೇಗನೆ |೨|
ಎಲ್ಲ ದೇವತೆಗಳನು ತಡೆದಿಹೆ
ಪುಲ್ಲ ವಾರಿಜ ನಯನೆ
ಗೊಲ್ಲ ಬಾಲನ ಪದ ಪಲ್ಲವ ನೋಡದೆ
ನಿಲ್ಲಲೊಲ್ಲದು ಮನ ಸೊಲ್ಲು ಲಾಲಿಸು ಬೇಗ |೩|
ಮಂಗಳಾಂಗಿಯೇ ನಿನ್ನ ಕಾಣದೆ
ಬಲು ಭಂಗ ಪಡುವೆನಮ್ಮ |
ಗಂಗಾ ಜನಕ ಸಿರಿ ರಂಗನಂಕದಿ ಕೂತು
ಭೃಂಗಕುಂತಳೆ ಹೃದಯಂಗಣ-ದೊಳಗಾಡೆ |೪|
ಇಂದಿರೇಶನ ರಾಣಿ ಎನ್ನಯ
ಮನ-ಮಂದಿರದೊಳು ಬಾ ನೀ |
ನಂದಗೋಕುಲ ಬಾಲಾನಿಂದು ಕರದೊಳೆತ್ತಿ
ತಂದು ತೋರಿಸೆ ಅರವಿಂದನಯನೆ ಲಕ್ಷ್ಮೀ |೫|
bAre veMkaTaramaNi SrI SrIdEvi
bAre veMkaTaramaNi ||pa||
bAre veMkaTaramaNi pArAyaNa kELe
cAru vadane upahAra kAlakke nitya ||a.pa||
Enu puNyave naMdu pArAyaNa
nIne kELuvi baMdu |
hIna mAnavanige nInu baruvi eMbo
j~jAnavillade ucca sthAnadoLage kUDe |1|
svapnadoLage baruvi SrI SrIdEvi
kShipra tanadi pOguvi |
sarpaSayana nammappa gOkula bAla
nappikoMbuva suKa oppise bEgane |2|
ella dEvategaLanu taDedihe
pulla vArija nayane
golla bAlana pada pallava nODade
nillalolladu mana sollu lAlisu bEga |3|
maMgaLAMgiyE ninna kANade
balu BaMga paDuvenamma |
gaMgA janaka siri raMganaMkadi kUtu
BRuMgakuMtaLe hRudayaMgaNa-doLagADe |4|
iMdirESana rANi ennaya
mana-maMdiradoLu bA nI |
naMdagOkula bAlAniMdu karadoLetti
taMdu tOrise araviMdanayane lakShmI |5|
Leave a Reply