Composer : Shri Prasannavenkata dasaru
ನಡೆದು ಬಾಮ್ಮ ಲಕುಮೀ ನಿನಗೆ
ನಡೆಮುಡಿಯ ಹಾಸುವೆ |
ನಡೆಮುಡಿಯ ಹಾಸಿ ನಾ ಚರಣ ಕಮಲಕ್ಕೆರಗುವೆ ||ಅ.ಪ.||
ಮರುಗ,ಮಲ್ಲಿಗೆ,ಧವನ,ಸಂಪಿಗೆ ಸರಗಳನ್ನೇ ಪೂಜಿಪೆ |
ಸರಗಳನ್ನೇ ಪೂಜಿಸಿ ನಾ ವರಗಳನ್ನೇ ಬೇಡುವೆ ||೧||
ಹೀರೆ,ಕುಂಬಳ ಕಾಯಿ,ಪಡವಳ ಶಾಖ ಪಾಕವ ಮಾಡುವೆ |
ಘನ್ನ ಶಾವಿಗೆ ಭಕ್ಷವು ನೈವೇದ್ಯವು ಪರಮಾನ್ನವು ||೨||
ಎಷ್ಟು ಬೇಡಿದರು ದಯ ಏಕೆ ಬರಲಿಲ್ಲ ಲಕ್ಷ್ಮೀ ನಿನಗೆ |
ದಿಟ್ಟ ಪ್ರಸನ್ನ ವೆಂಕಟ ವಿಠಲನ ಪಟ್ಟದ ರಾಣಿಯೆ ||೩||
naDedu bAmma lakumI ninage
naDemuDiya hAsuve |
naDemuDiya hAsi nA caraNa kamalakkeraguve ||a.pa.||
maruga,mallige,dhavana,saMpige saragaLannE pUjipe |
saragaLannE pUjisi nA varagaLannE bEDuve ||1||
hIre,kuMbaLa kAyi,paDavaLa shAkha pAkava mADuve |
Ganna SAvige BakShavu naivEdyavu paramAnnavu ||2||
eShTu bEDidaru daya Eke baralilla lakShmI ninage |
diTTa prasanna veMkaTa viThalana paTTada rANiye ||3||
Leave a Reply