Composer : Shri Mahipati dasaru
ಜಯದೇವಿ ಜಯದೇವಿ ಜಯ ಆದಿಶಕ್ತಿ |
ಜಯಜಯ ಚಂದ್ರಲೆಮಾತೆ ರವಿಶತ ನಿಜದೀಪ್ತಿ ||ಪ||
ಸುರಮುನಿ ಸೇವಿತವಾದ ಚಾರುವಿಲಾಸದಲಿ |
ಇರುತಿರೆ ನಾರಾಯಣಮುನಿ ಭಕುತಿಗೆ ಪ್ರೇಮದಲಿ |
ಕರುಣದಿ ಭೀಮರಥಿಯ ಬಂದು ನೀ ತೀರದಲಿ |
ದಾರಿ ತಪ್ಪಿದ ದುರುಳನ ಮರ್ದಿಸಿ ಭ್ರಮರದಲಿ ||೧||
ಅಂದಿಗಿಂದಿಗೆ ನಿಂತು ಪ್ರಸನ್ನತಿ ಗ್ರಾಮದಲಿ |
ದ್ವಂದ್ವಚರಣವ ದೋರಿ ಮುಕುತಿಗೆ ಖೂನದಲಿ |
ಬಂದವ ದರ್ಶನ ಸ್ಪರ್ಶನ ಪೂಜನ ಮಾಡುತಲಿ |
ಛಂದದಿ ಇಹಪರ ಸುಖವ ಪಡೆದರು ಸುಲಭದಲಿ ||೨||
ವಿವೇಕ ಹರಿವಾಣದಿ ಭಾವದಾರತಿ ನಿಲಿಸಿ |
ತೀವಿದ ಸಮ್ಮಜ್ಞಾನದ ಜ್ಯೋತಿಯ ಪ್ರಜ್ವಲಿಸಿ |
ಆವಗು ಬೆಳಗುವ ಮಹಿಪತಿ ನಂದನ ತಾ ನಮಿಸಿ |
ಕಾವುದು ಶರಣರ ಅನುದಿನ ಅಪರಾಧವ ಕ್ಷಮಿಸಿ ||೩||
jayadEvi jayadEvi jaya AdiSakti |
jayajaya chaMdralemAte raviSata nijadIpti ||pa||
suramuni sEvitavAda cAruvilAsadali |
irutire nArAyaNamuni Bakutige prEmadali |
karuNadi bhImarathiya baMdu nI tIradali |
dAri tappida duruLana mardisi bhramaradali ||1||
aMdigiMdige niMtu prasannati grAmadali |
dvaMdvacaraNava dOri mukutige khUnadali |
baMdava darshana sparshana poojana mADutali |
ChaMdadi ihapara sukhava paDedaru sulabhadali ||2||
vivEka harivANadi bhAvadArati nilisi |
tIvida sammaj~jAnada jyOtiya prajvalisi |
Avagu beLaguva mahipati naMdana tA namisi |
kAvudu sharaNara anudina aparAdhava kShamisi ||3||
Leave a Reply