Composer : Shri Prasannavenkata dasaru
ಎಂದಿಗಾದರೂ ಒಮ್ಮೆ ವೃಂದಾವನದಿಂದ |
ಬಂದು ಈ ಕಂದನನು ಕೂಗಲಾರೆಯ ಗುರುವೆ [ಪ]
ಮಂದರೋದ್ಧರನ ಮಹಾಮಂದಿರವ ತಂದಿಳಿಸಿ |
ಚಂದ ಮುಕುತಿ ಜ್ಞಾನದಾನಂದವನೆ ನೀಡಿ [ಅ.ಪ]
ಅಪ್ರಮೇಯನೆ ನೀನು ಅಪರೂಪದಲ್ಲಿ ಅಂದು |
ಅಪ್ಪಣ್ಣಾಚಾರ್ಯರಿಗೆ ಒಲಿದು ಪ್ರಕಟಗೊಂಡು
ಸ್ವಪದವಲಂಬಿತರ ಪೊರೆವ ಗುರು ನೀ ಏನೆಂಬರು |
ಸುಪ್ರಸಿದ್ಧಿಯ ಕೇಳಿ ಒಪ್ಪಿಸಿ ಬಂದಿರುವೆ [೧]
ಅಶನವಸನ ಹುಸಿ ಮಾತನಾಡಿ ಕಾಗಿಸಿ
ಘಾಸಿಗೊಳಿಸಿದೆ ಎನ್ನ ಮನಕೆ ಮುಸುಕ್ ಹಾಕಿ
ಮೋಸಹೋದೆ ಗುರುವೆ ಭವ ಪಾಶದಲ್ಲಿ ಸಿಲುಕಿ |
ಆಸರೆಯ ನೀಡು ಬಾ ಹರಿದಾಸನೆನಿಸಿ [೨]
ಧನಕನಕಗಳ ಬಯಸಿ ನಿನ್ನ ಕರೆಯುವನಲ್ಲ |
ನಿನ್ನವರ ಮನೆಯಲ್ಲಿ ಕುನ್ನಿಯಾಗಿರಿ ಸೋ ಎನ್ನ |
ಮನೋಜ ಜನಕ ಶ್ರೀಪ್ರಸನ್ವೆಂಕಟನೊಲುಮೆ |
ಸನ್ನುತವು ಕೂಡಿಸೆನ್ನ ಅನುಗ್ರಹಿಸು ಬಾ ತಂದೆ [೩]
eMdigAdarU omme vRuMdAvanadiMda |
baMdu I kaMdananu kUgalAreya guruve [pa]
maMdarOddharana mahAmaMdirava taMdiLisi |
caMda mukuti j~jAnadAnaMdavane nIDi [a.pa]
apramEyane nInu aparUpadalli aMdu |
appaNNAcAryarige olidu prakaTagoMDu
svapadavalaMbitara poreva guru nI EneMbaru |
suprasiddhiya kELi oppisi baMdiruve [1]
aSanavasana husi mAtanADi kAgisi
GAsigoLiside enna manake musuk hAki
mOsahOde guruve Bava pASadalli siluki |
Asareya nIDu bA haridAsanenisi [2]
dhanakanakagaLa bayasi ninna kareyuvanalla |
ninnavara maneyalli kunniyAgiri sO enna |
manOja janaka SrIprasanveMkaTanolume |
sannutavu kUDisenna anugrahisu bA taMde [3]
Leave a Reply