Yatiye enage neene gatiye

Composer: Shri Gopaladasaru

By Smt.Shubhalakshmi Rao

ಯತಿಯೆ ಎನಗೆ ನೀನೆ ಗತಿಯೇ ಅಲ್ಲಾದನ್ನೆ ಅ |
ಪ್ರತಿಯೆ ನಾ ಕಾಣೆ ಯಿನ್ನಿಕ್ಷಿತಿಯೊಳಾರಸಿ ನೋಡಾ |
ಸತತ ಸನ್ಮಾರ್ಗದ ಪಥವನು ತೋರಿಸಿ |
ಗತಿಯಾಗು ದಶಪ್ರಮತಿ ಮುನಿರಾಯ || ಪ ||

ಜೀವನಾಮಕ ಸರ್ವಜೀವಾರಾಧಾರ ಸಕಲ |
ಜೀವೋತ್ತುಮನೆ ವುಪಜೀವ ಸತ್ವ ಜೀವರಾ |
ಜೀವೇಶ ಐಕ್ಯವೆಂಬೊ ಜೀವಿಗಳಿಂದ ಜಗದ
ಜೀವರೆಲ್ಲರು ಬಲು ನಿರ್ಜೀವಿಗಳಾಗಿ ಯಿನ್ನು |
ಜೀವರಂದಾದಿ ವಿಪ್ರಜೀವನ ಮನಿಯಲ್ಲಿ
ಜೀವಿತನಾಗಿ ಸಜ್ಜಿವಾರ ಗೋಸುಗಾ |
ಜೀವ ಈಶಗೆ ಭೇದ ಜೀವಜೀವಕೆ ಭೇದ |
ಈ ವಿಧ ಶಾಸ್ತ್ರವುಪಜೀವನ ಮಾಡಿಪ್ಪ || ೧ ||

ಮಾನನಿಧಿಯೆ ಪವಮಾನನಾ ಅಂಶ ಅಭಿ |
ಮಾನ ನಿನ್ನದು ದುಷ್ಟ ಮಾನವಾರ ಸಂಗ ಹ |
ಮ್ಯಾನೆ ಬಿಡಿಸಿ ಸಾಧು ಮಾನವರ ಸಂಗ |
ವಮ್ಮಾನದಲ್ಲಿಟ್ಟು ಯನ್ನ ಮಾನವಂತನ ಮಾಡಿ |
ಮಾನವಜನ್ಮ ಸುಮ್ಮಾನೆ ಮಾಡದೆ ಕ್ರ
ಮಾನುಸಾರ ಆಚಮಾನ ಮೊದಲಾದ |
ಮಾನಸ ಕರ್ಮವು ನೇಮನಗಳು ಅನ್ಯ |
ಗಾಮಿನ ಮಾಡದೇ ವಾಮಾನಗೊಪ್ಪಿಸೊ || ೨ ||

ಬಂಧ ಮೋಚಕ ಪ್ರತಿಬಂಧ ಆಗುವ ಕರ್ಮ |
ಬಂಧಿಸಿ ಯೆನಗೆ ಸಾಮಂಧಿಸಾದಂತೆ ಮಾಡಿ |
ಬಂದಾ ಬಂದಾ ವಿಷಯ ಬಂದಾಗಲಿ ಸಾದನು |
ಬಂಧಿ ನೀಯನಗಾಪ್ತ ಬಂಧುಯಂದು ವಂದಿಪೆ |
ಎಂದೆಂದಿಗೆ ಮನ ಮಂದಿರಾದಲಿ ಯಿನ್ನು |
ತಂದು ನಿಲ್ಲಿಸು ಆನಂದ ಮೂರುತಿಯನ್ನು |
ಇಂದಿರೆಯರಸಾ ಗೋಪಾಲವಿಠ್ಠಲನ್ನ |
ಕಂದನೆ ಶ್ರೀಮದಾನಂದತೀರಥರಾಯಾ || ೩ |


yatiye enage nIne gatiyE allAdanne a |
pratiye nA kANe yinnikShitiyoLArasi nODA |
satata sanmArgada pathavanu tOrisi |
gatiyAgu daSapramati munirAya || pa ||

jIvanAmaka sarvajIvArAdhAra sakala |
jIvOttumane vupajIva satva jIvarA |
jIvESa aikyaveMbo jIvigaLiMda jagada
jIvarellaru balu nirjIvigaLAgi yinnu |
jIvaraMdAdi viprajIvana maniyalli
jIvitanAgi sajjivAra gOsugA |
jIva ISage BEda jIvajIvake BEda |
I vidha SAstravupajIvana mADippa || 1 ||

mAnanidhiye pavamAnanA aMSa aBi |
mAna ninnadu duShTa mAnavAra saMga ha |
myAne biDisi sAdhu mAnavara saMga |
vammAnadalliTTu yanna mAnavaMtana mADi |
mAnavajanma summAne mADade kra
mAnusAra AcamAna modalAda |
mAnasa karmavu nEmanagaLu anya |
gAmina mADadE vAmAnagoppiso || 2 ||

baMdha mOcaka pratibaMdha Aguva karma |
baMdhisi yenage sAmaMdhisAdaMte mADi |
baMdA baMdA viShaya baMdAgali sAdanu |
baMdhi nIyanagApta baMdhuyaMdu vaMdipe |
eMdeMdige mana maMdirAdali yinnu |
taMdu nillisu AnaMda mUrutiyannu |
iMdireyarasA gOpAlaviThThalanna |
kaMdane SrImadAnaMdatIratharAyA || 3 ||

Leave a Reply

Your email address will not be published. Required fields are marked *

You might also like

error: Content is protected !!