Idiryaro guruve Samaryaro

Composer : Shri Purandara dasaru

By Smt.Shubhalakshmi Rao

ಇದಿರ್ಯಾರೊ ಗುರುವೆ ಸಮರ್ಯಾರೊ ||ಪ||
ಮದನಜನಕ ಪ್ರಿಯ ಮಧ್ವರಾಯ ||ಅ||

ಸನ್ನುತಮಹಿಮ ಪ್ರಸನ್ನವದನ ನಿನ-
ಗನ್ಯನಲ್ಲವೋ ನೀನೆನ್ನ ರಕ್ಷಿಸಬೇಕೋ
ನಿನ್ನ ನೋಡಿದವರು ಧನ್ಯರಾಗುವರು
ಎನ್ನ ದಯಾಮೂರ್ತಿ ಮನ್ನಿಸಿನೋಡೊ |೧|

ದುರ್ಜನರನು ಗರ್ಜನದಿಂದ ಓಡಿಸಿ
ಸಜ್ಜನರನು ಸಂರಕ್ಷಿಸಿದಾತನೆ
ಈ ಜಗದಲ್ಲಿ ಮಧ್ಯಗೇಹರ ಪತ್ನಿಯ
ಪೂಜ್ಯ ಜಠರದಿ ಜನಿಸಿದ ಧೀರ |೨|

ವೇದಶಾಸ್ತ್ರಗಳಿಂದ ಮಾಯಿಗಳ ಖಂಡಿಸಿ
ಸಾಧಿಸಿ ಹರಿಯೆ ಸರ್ವೋತ್ತಮನೆಂದು
ಮೋದಭರಿತವದ ದಿವ್ಯಶಾಸ್ತ್ರವ ಮಾಡಿದ
ಮೋದತೀರ್ಥ ಪುರಂದರವಿಠ್ಠಲದಾಸ |೩|


idiryAro guruve samaryAro ||pa||
madanajanaka priya madhvarAya ||a||

sannutamahima prasannavadana nina-
ganyanallavO nInenna rakShisabEkO
ninna nODidavaru dhanyarAguvaru
enna dayAmUrti mannisinODo |1|

durjanaranu garjanadiMda ODisi
sajjanaranu saMrakShisidAtane
ee jagadalli madhyagEhara patniya
pUjya jaTharadi janisida dhIra |2|

vEdaSAstragaLiMda mAyigaLa KaMDisi
sAdhisi hariye sarvOttamaneMdu
mOdaBaritavada divyaSAstrava mADida
mOdatIrtha puraMdaraviThThaladAsa |3|

Leave a Reply

Your email address will not be published. Required fields are marked *

You might also like

error: Content is protected !!