Composer : Shri Gopaladasaru
ಮಧ್ವಮುನಿರಾಯ ಉದ್ಧರಿಪುದು ಜೀಯಾ |
ಪೊದ್ದಿಸಿದಂತಘ ಒದ್ದು ಕಡಿಗೆ ನೂಕಿ | ಶುದ್ಧನ್ನ ಮಾಡೆನ್ನಾ | ಪ |
ಕ್ಷೋಣೆಯೊಳಗೆ ಇನ್ನು ವಾನರ ರೂಪಧರಿಸಿ |
ಜಾನಕಿ ರಮಣನಾಜ್ಞಾನುಸಾರದಿ ಇನ್ನು
ನೀನು ಅಂಬುಧಿ ದಾಟಿ ದಾನವಾರಿಯಳ ನೋಡಿ |
ನಾನಾ ವನಗಳ ಕಿತ್ತಿ ಹೀನಾ ರಾವಣನ ಪುರ |
ದಾನ್ನವರಳ್ದು ಲಂಕಾದಾಹನವ ಮಾಡಿ ಬಂದ || ೧ ||
ಸೋಮಕುಲದಿ ಜನಿಸಿ ಪ್ರೇಮದಿ ಐವರು ಕೂಡಿ |
ಆ ಮಹಾ ದುರಿಯೋಧನನ ತರಿದು ದೈತ್ಯಾ |
ಸ್ತೋಮವನು ಅಳಿದೇ ನೇಮದಿ ಕೀಚಕನ ಗುದ್ದಿ |
ಸ್ವಾಮಿ ದ್ರೋಹಿಯಾದ ಆ ಮಗಧನ್ನೇ ಕೊಂದು |
ಹೋಮವ ಮಾಡಿ ಶ್ರೀ ರಾಮಕೃಷ್ಣರಿಗರ್ಪಿಸಿದಿ || ೨ ||
ದುರುಳಾ ಸಂಕರಾ ತಾನು ಧರಿಯೊಳು ಅವತರಿಸಿ |
ಹರಿಯಿಲ್ಲವೆಂದು ಮಿಥ್ಯಾ ಜ್ಞಾನ ಶಾಸ್ತ್ರಗಳೆಲ್ಲ |
ಪರಿಪರಿಯಿಂದ ರಚಿಸಿ | ದುರ್ಮತ ವೆಗ್ಗಳಿಸೆ |
ಸುರರು ಭೂಸುರರೆಲ್ಲ ಮೊರೆಯಿಡಲಾಗಿನ್ನು |
ಹರಿಯಾಜ್ಞಾದಿ ಅವತರಿಸಿದೆ ಅವನಿಯೊಳು || ೩ ||
ಮಧ್ಯಗೇಹಗೆ ಸುತನಾಗಿ ತಿದ್ದಿದೆ ಸಾಲ ತಿಂತಿಣಿ ಬೀಜದಿ
ಪದ್ಧತಿಯಲಿ ಗೋವು ವುಣಲಿತ್ತವಂಗ |
ಊರ್ಧ್ವಲೋಕವನಿತ್ತೆ ಬುದ್ಧಾ ಚಾರ್ವಾಕಮತ |
ಅದ್ವೈತ ಖಂಡ್ರಿಸಿ ಗೆದ್ದು ಸಂಕರನಿಗೆ,
ಪಂಡಿತಾಚಾರ್ಯರ ಸದ್ವೈಷ್ಣವರ ಮಾಡ್ದೆ || ೪ ||
ನಿಗಮಾರ್ಥಗಳು ಯೆಲ್ಲ | ಬಗೆಬಗೆ ಪುರಾಣಗಳು |
ಜಗದ ಜೀವರಿಗೆ ಅಗೋಚರವಾಗಿ , ಲಘುವಾಗಿ
ತಿಳಿವಂತೆ ಮಿಗಿಲಾಗಿ ಮೂವತ್ತೇಳು |
ಸೊಗಸು ಗ್ರಂಥವ ರಚಿಸಿ ನಗವಾಗಿ ಯಿನ್ನು |
ತಾತ್ಪರ್ಯವ ಮಾಡಿನ್ನು ಜಗವನುದ್ಧರಿಸಿದೆ ನೀ || ೫ ||
ಶ್ರೀಗುರು ಪದ್ಮನಾಭ ಮಿಗಿಲು ನರಹರಿ ಮಾಧವರು |
ಅಘದೂರ ಅಕ್ಶೋಭ್ಯ ತೀರ್ಥರಾಗಳಿಗೆ |
ಸೊಗಸಿಂದುಪದೇಶಿಸಿ ಹಗಲಿರುಳು ಸಕಲ |
ಶಾಸ್ತ್ರಗಳನ್ನು ಅರವುತಿರೆ | ಧಿಗನೆ ದೀಪವು ಶಾಂತ
ವಾಗಲಾಗಿ ನೀಯಿನ್ನು ಝಗಯೆನಿಸಿದೆ ಬೆರಳಾ || ೬ ||
ಆನಂದ ತೀರಥನೆ ಶತ ಆನಂದ ಮೂರುತಿಯೆ |
ಆನಂದದಿ ನಿನ್ನ ಭಜಿಸೋ ಭಕುತರಿಗೆ |
ಆನಂದವಾ ನೀವೆ ಯೇನಂದರಿಯೆ ನಿನ್ನ |
ಆನೊಂದು ಬೇಡುವೆನೂ ಮಾನಸದೊಳು |
ನಮ್ಮ ಗೋಪಾಲವಿಠಲನ್ನ ಕಾಣಿಸಿಕೊಡು ಎನಗೆ || ೭||
madhvamunirAya uddharipudu jIyA |
poddisidaMtaGa oddu kaDige nUki |
Suddhanna mADennA | pa |
kShONeyoLage innu vAnara rUpadharisi |
jAnaki ramaNanAj~jAnusAradi innu
nInu aMbudhi dATi dAnavAriyaLa nODi |
nAnA vanagaLa kitti hInA rAvaNana pura |
dAnnavaraLdu laMkAdAhanava mADi baMda || 1 ||
sOmakuladi janisi prEmadi aivaru kUDi |
A mahA duriyOdhanana taridu daityA |
stOmavanu aLidE nEmadi kIcakana guddi |
svAmi drOhiyAda A magadhannE koMdu |
hOmava mADi SrI rAmakRuShNarigarpisidi || 2 ||
duruLA saMkarA tAnu dhariyoLu avatarisi |
hariyillaveMdu mithyA j~jAna SAstragaLella |
paripariyiMda racisi durmata veggaLise |
suraru BUsurarella moreyiDalAginnu |
hariyAj~jAdi avatariside avaniyoLu || 3 ||
madhyagEhage sutanAgi tiddide sAla tiMtiNi bIjadi
paddhatiyali gOvu vuNalittavaMga |
UrdhvalOkavanitte buddhA cArvAkamata |
advaita KaMDrisi geddu saMkaranige,
paMDitAcAryara sadvaiShNavara mADde || 4 ||
nigamArthagaLu yella | bagebage purANagaLu |
jagada jIvarige agOcaravAgi laGuvAgi
tiLivaMte migilAgi mUvattELu |
sogasu graMthava racisi nagavAgi yinnu |
tAtparyava mADinnu jagavanuddhariside nI || 5 ||
SrIguru padmanABa migilu narahari mAdhavaru |
aGadUra akSOBya tIrtharAgaLige |
sogasiMdupadESisi hagaliruLu sakala |
SAstragaLannu aravutire | dhigane dIpavu
SAMta vAgalAgi nIyinnu Jagayeniside beraLA || 6 ||
AnaMda tIrathane Sata AnaMda mUrutiye |
AnaMdadi ninna BajisO Bakutarige |
AnaMdavA nIve yEnaMdariye ninna |
AnoMdu bEDuvenU mAnasadoLu |
namma gOpAlaviThalanna kANisikoDu enage || 7||
Leave a Reply