Jogi bandano

Composer : Shri Kakhandaki Krishnadasaru

ಜೋಗಿ ಬಂದನೋ ಗೋವಿಂದಾ | ನಮ್ಮ |
ಬಾಗಿಲಿಗೆ ನಡೆತಂದಾ |ಪ.|
ಬೇಗನೇ ಪವಡಿಸು ಕಂದಾ | ನಾ |
ಜೋಗುಳಪಾಡುವೆ ಛಂದಾ |ಅ.ಪ|

ಜಟೆಯಲಿ ಗಂಗೆಯ ಧರಿಸಿ ಧರಿಸಿ ಮುಂ |
ಮುಡಿಯಲಿ ಚಂದ್ರನ ನಿಲಿಸಿ |
ಪಿಡಿಗಣ್ಣ ಮಾರನೆಂದೆನಿಸಿ
ಮಣಿವಿಡಿಗಳ ಕುಂಡಲ ವಿರಿಸಿ |
ಬಿಡದೆ ವಿಷವನುಂಡು ಕಡುಗಪ್ಪುಗೋರಳೊಲು |
ಒಡನೆರುಂಡಮಾಲೆಯ ದಡಬಡಿಸುವ [೧]

ಇಟ್ಟವಿಭೂತಿಯತನುವಾ ತನುವಾ | ಶಿವ |
ಕೊಟ್ಟ ರುದ್ರಾಕ್ಷಿಲಿ ಮೆರೆವಾ |
ನೆಟ್ಟನೆ ಡಮರುಗ | ಮುಟ್ಟಿ | ನುಡಿಸುತಲಿ |
ಛಟ ಫಟ ಧ್ವನಿಯಾರ್ಭಟದ ವೈರಾಗಿ [೨]

ಶ್ರೀರಾಮನಾಮವ ಒಲಿದು ಒಲಿದು ತಾ
ಕರದಿ ಕಪಾಲವ ಪಿಡಿದು |
ಧರೆಯೊಳ್ ಭಿಕ್ಷು ನೇವದಂದು
ಹರನು ತಿರುಗುವ ವಿಜ್ಞಾನ ಸಿಂಧು |
ಗುರು ಮಹಿಪತಿ ಸುತ ನರನಾಟಕದೊಳು
ಅವತರಿಸಿಹ ಗೋಕುಲದ ಸಿರಿನೋಡಲು [೩]


jOgi baMdanO gOviMdA | namma |
bAgilige naDetaMdA |pa.|
bEganE pavaDisu kaMdA | nA |
jOguLapADuve CaMdA |a.pa|

jaTeyali gaMgeya dharisi dharisi muM |
muDiyali caMdrana nilisi |
piDigaNNa mAraneMdenisi
maNiviDigaLa kuMDala virisi |
biDade viShavanuMDu kaDugappugOraLolu |
oDaneruMDamAleya daDabaDisuva [1]

iTTaviBUtiyatanuvA tanuvA | Siva |
koTTa rudrAkShili merevA |
neTTane Damaruga | muTTi | nuDisutali |
CaTa PaTa dhvaniyArBaTada vairAgi [2]

SrIrAmanAmava olidu olidu tA
karadi kapAlava piDidu |
dhareyoL BikShu nEvadaMdu
haranu tiruguva vij~jAna siMdhu |
guru mahipati suta naranATakadoLu
avatarisiha gOkulada sirinODalu [3]

Leave a Reply

Your email address will not be published. Required fields are marked *

You might also like

error: Content is protected !!