Composer : Shri Gurugovinda vittala
ಶಿವ ಶಿವ ಶಿವ ಶಿವ – ಶಿವರಾಯ |
ನಮ್ಮ ಭವ ಭಯ ಪರಿಹರ ಮಹರಾಯ [ಪ]
ಮಂಗಳರೂಪಿ ಗೌ | ರಾಂಗನೆ ದೂರ್ವಾಸ
ತಿಂಗಳ ಧರಿಸಿಹ | ಅಂಗಜ ಮದಹಾ |
ಭಂಗ ಬಡಿಪ ಭವ |
ಭಂಗಿಸಿ ಸುಜನರ ಸಂಗವ ಕೊಡಿಸೊ ನೀ |
ಲಾಂಗನ ಪ್ರಿಯ ಸಖ [೧]
ಪರಿಸರ ಸಂಸ್ಕೃತ | ಗರಳವ ಭುಂಜಿಸಿ
ಸುರರನು ಪೊರೆಯುವೆ | ಕರಿಗೊರಳಾ |
ಮುರಳಿಯ ಧರ ಸಿರಿ |
ಕರಿವರದನ ದಯ ನಿರುತ ನಿನ್ನೊಳಗುಂಟು |
ಪೊರೆಯೊ ಮೃತ್ಯುಂಜಯ [೨]
ಸ್ವಾಪದಿ ಗರಸಹ | ರೂಪವ ತೋರ್ದೆ –
ಸು-ರಾಪಗಧರ ಹರ | ತಾಪಸಿ ಶುಕನೇ |
ಗೋಪತಿ ಗುರು ಗೋ | ವಿಂದ ವಿಠ್ಠಲನ ರೂಪವ ತೋರಿಸಿ |
ನೀ ಪರಿಪೋಷಿಸು [೩]
Siva Siva Siva Siva – SivarAya |
namma Bava Baya parihara maharAya [pa]
maMgaLarUpi gau | rAMgane dUrvAsa
tiMgaLa dharisiha | aMgaja madahA |
BaMga baDipa Bava |
BaMgisi sujanara saMgava koDiso nI |
lAMgana priya saKa [1]
parisara saMskRuta | garaLava BuMjisi
suraranu poreyuve | karigoraLA |
muraLiya dhara siri |
karivaradana daya niruta ninnoLaguMTu |
poreyo mRutyuMjaya [2]
svApadi garasaha | rUpava tOrde –
su-rApagadhara hara | tApasi SukanE |
gOpati guru gO | viMda viThThalana rUpava tOrisi |
nI paripOShisu [3]
Leave a Reply