Composer : Shri Gurugovinda vittala
ಭದ್ರಾಣಿ ಪತಿ ಎನಿಪ | ರುದ್ರದೇವನೆ ನಮೋ
ಕಾದ್ರವೇಯನ ಪದ | ಭದ್ರವೋ ನಿನಗೆ [ಪ]
ವಿರೂಪಾಕ್ಷ ಅಧ್ಯಕ್ಷ | ಹರಿ ಪಕ್ಷ ರುದ್ರಾಕ್ಷ
ಹರ್ಯಕ್ಷ ಹನದಕ್ಷ | ಕರುಣಾ ಕಟಾಕ್ಷ
ನಿಲಕ್ಷ ನಿಟಿಲಾಕ್ಷ | ಶ್ಮಶಾನದಲಿ ದೀಕ್ಷ
ಅಕ್ಷಾರಿ ಪದದೀಕ್ಷ | ಪಕ್ಷಿವಹ ಕೃಪೆ ಈಕ್ಷಾ [೧]
ವೃಷನಾಭ ವಶದರ್ಪ | ವೃಷ ಋಷಭ ವೃಷಾಂಕ
ವೃಷಶೃಂಗ ವೃಷಧ್ವಜನೆ | ವೃಷಭೇಕ್ಷಣಾ |
ವೃಷ ಭೂತ ವೃಷ ಶರನೆ | ವೃಷಪತಿ ವೃಷಾ ವರ್ತ
ವೃಷಾಯುಧ ವೃಷೇಶ್ವರನೆ | ವೃಷ ಭೋದರಪಾಹಿ [೨]
ದೂರ್ವಾಸ ಭೂವನೇಶ | ಸುರಪೇಶ ಉಗ್ರೇಶ
ಗೌರೀಶ ಪ್ರಮಥೇಶ | ಅವ್ಯಕ್ತ ಕೇಶಾ |
ಚೀರ ವಾಸ ಸುವಾಸ ಸ್ವರ್ಣಕೇಶ ಭೂತೇಶ
ಈರಪತಿ ಗುರು ಗೋವಿಂದ | ವಿಠಲ ಭಜಕೇಶ [೩]
BadrANi pati enipa | rudradEvane namO
kAdravEyana pada | BadravO ninage [pa]
virUpAkSha adhyakSha | hari pakSha rudrAkSha
haryakSha hanadakSha | karuNA kaTAkSha
nilakSha niTilAkSha | SmaSAnadali dIkSha
akShAri padadIkSha | pakShivaha kRupe IkShA [1]
vRuShanABa vaSadarpa | vRuSha RuShaBa vRuShAMka
vRuShaSRuMga vRuShadhvajane | vRuShaBEkShaNA |
vRuSha BUta vRuSha Sarane | vRuShapati vRuShA varta
vRuShAyudha vRuShESvarane | vRuSha BOdarapAhi [2]
dUrvAsa BUvanESa | surapESa ugrESa
gaurISa pramathESa | avyakta kESA |
cIra vAsa suvAsa svarNakESa BUtESa
Irapati guru gOviMda | viThala BajakESa [3]
Leave a Reply