Composer : Shri Gopaladasaru
ಶರಣು ಶಂಕರ ಶಿವ ಮೃತ್ಯುಂಜಯ |
ಭವ ಶರಣು ಸಿತಗ್ರೀವ |
ಶರಣು ಪದ್ಮಜಭವ ಶರಣು ಪಾರ್ವತಿಧವ |
ಶರಣು ಶರಣು ಮಾಹದೇವ | ಪ |
ರಾಜಾ ಮಹರಾಜಾ |
ರಾಜ ಪೂಜಿತಾವೃಷಾ |
ರಾಜವಾರೂಢಾನೆ ಪ್ರಮಥ |
ರಾಜಾ ನಿಕರ ಅಧಿರಾಜಾ ಅನಿಮಿಷಾಧಿ ರಾಜಾ |
ಆರಾಧಿತ ಚರಣ |
ರಾಜಶೇಖರ ಲೇಖಾರಾಜಾ ನಿರ್ಜಿತ ಅಹಿ |
ರಾಜ ಕಂಕಣ ಕಾಣ ಮಥನಾ |
ರಾಜಾ ರಾಜಾಮತ ತಿರೂಪ || ೧ ||
ಅಂಬರಾ ದಾಹನಾಧಿ ಗಜ ಅಜಿ |
ನಾಂಬರಾಧರವಾದ ಕಮಥಾನು |
ಅಂಬರಾ ಮಣಿ ಸಪ್ತರ್ಚಿ ಹಿಮಕರ ತ್ರಿ |
ಯಂಬಕ ಶುಕ ದುರ್ವಾಸ |
ಅಂಬರಾಧೀಶ ಕುಮಾರನ್ನ ಜನಕಾನೆ |
ಅಂಬಾರಕೀಶ ಮಹೇಶಾ |
ಅಂಬಾರ ಗಣಿಯ ಜನಕಾನ ನಿರುತಾ |
ಹೃದಯಾಂಬರದಲ್ಲಿಟ್ಟ ಸಾಂಬಾ || ೨ ||
ಫಾಲಾನಯನನೆ ವನದೊಳು ಸುದ್ಯುಮ್ನ |
ನೃಪಾಲನ ವನಿತೆ ಮಾಡಿದಾನೆ |
ಪಾಲಿಸೋ ಯನ್ನವಾಗುಣಗಳೆಣಿಸಾದೆ |
ಕಪಾಲಿ ಕೈಲಾಸ ಮಂದಿರಾನೆ |
ಪಾಲಾಬಿ ನಿಲಯಾ ಗೋಪಾಲವಿಠಲ ಜಗ |
ತ್ಪಾಲನ ತೋರಿಸು ಗುರುವೆ |
ಆಲೋಚಿಸಲಿ ವಿದ್ದದ್ದು ಅನ್ಯಪಾಲಾ ಮಾಡಿಸಾದಿರು |
ಪಾಲಿಗೆ ಬಂದೆ ನಿನ್ನ ಗುರುವೆ || ೩ ||
SaraNu SaMkara Siva mRutyuMjaya |
Bava SaraNu sitagrIva |
SaraNu padmajaBava SaraNu pArvatidhava |
SaraNu SaraNu mAhadEva | pa |
rAjA maharAjA |
rAja pUjitAvRuShA |
rAjavArUDhAne pramatha |
rAjA nikara adhirAjA animiShAdhi rAjA |
ArAdhita caraNa |
rAjaSEKara lEKArAjA nirjita ahi |
rAja kaMkaNa kANa mathanA |
rAjA rAjAmata tirUpa || 1 ||
aMbarA dAhanAdhi gaja aji |
nAMbarAdharavAda kamathAnu |
aMbarA maNi saptarci himakara tri |
yaMbaka Suka durvAsa |
aMbarAdhISa kumAranna janakAne |
aMbArakISa mahESA |
aMbAra gaNiya janakAna nirutA |
hRudayAMbaradalliTTa sAMbA || 2 ||
PAlAnayanane vanadoLu sudyumna |
nRupAlana vanite mADidAne |
pAlisO yannavAguNagaLeNisAde |
kapAli kailAsa maMdirAne |
pAlAbi nilayA gOpAlaviThala jaga |
tpAlana tOrisu guruve |
AlOcisali viddaddu anyapAlA mADisAdiru |
pAlige baMde ninna guruve || 3 ||
Leave a Reply