Neela kandhara

Composer : Shri Prasannavenkata dasaru

ನೀಲಕಂಧರ ಶೈಲಜಾಧವ ರುಂಡಮಾಲಧರಾ
ಶೂಲಿ ಪನ್ನಗಧರ ಕಪಾಲಿ ಪಾಲಿಸೆನ್ನ ಹರಾ [ಪ]

ಚಂಚಲತೆ ದೂರಿಟ್ಟು ನಿರ್ವಂಚನೆಯಲಿ |
ಇಂಚು ಬಿಡದೆ ಕಂಚಿವರದನ ಚರಿತೆ ಬರೆಸು ||
ಮುಂಚಿನಾ ಪರಮೇಷ್ಠಿ ಮಧ್ವರ ಪಂಚಭೇದಪ್ರ |
ಪಂಚ ಜ್ಞಾನದ ಭಿಕ್ಷೆ ಕೊಡಿಸು ಪಂಚಾಕ್ಷರಿಯೆ [೧]

ಜಡೆಯೊಳೆಲ್ಲವು ಜಲವು ಕಡು ಸುಡುಗಾಡುಮನೆ |
ಅಡವಿಪ್ರಾಣಿಯ ಚರ್ಮದುಡುಗೆ ತೊಟ್ಟವನೆ ||
ಒಡಲ್ಹರಕ ಗಜಮುಖನ ಜನಕನೆ ಮೃಡಹರನೆ |
ಒಡನೆ ರಾಮನ ನಾಮ ಜಾಡನು ಪಿಡಿದು ತಿರುಗುವ [೨]

ಬೊಮ್ಮನ ಸುತ ಪರಬೊಮ್ಮನ ಪೌತ್ರನೆ |
ಕಮ್ಮಗೋಲನ ತರಿದ ಕಾಮದಹನೇ ||
ಸುಮಾಸ್ತ್ರನಯ್ಯ ಪ್ರಸನ್ವೆಂಕಟನೊಮ್ಮೆ |
ಸುಮ್ಮನದಲಿ ನೆನೆವಂತೆ ಮಾಡೈ ಶಿವನೇ [೩]


nIlakaMdhara SailajAdhava ruMDamAladharA
SUli pannagadhara kapAli pAlisenna harA [pa]

caMcalate dUriTTu nirvaMcaneyali |
iMcu biDade kaMcivaradana carite baresu ||
muMcinA paramEShThi madhvara paMcaBEdapra |
paMca j~jAnada BikShe koDisu paMcAkShariye [1]

jaDeyoLellavu jalavu kaDu suDugADumane |
aDaviprANiya carmaduDuge toTTavane ||
oDalharaka gajamuKana janakane mRuDaharane |
oDane rAmana nAma jADanu piDidu tiruguva [2]

bommana suta parabommana pautrane |
kammagOlana tarida kAmadahanE ||
sumAstranayya prasanveMkaTanomme |
summanadali nenevaMte mADai SivanE [3]

Leave a Reply

Your email address will not be published. Required fields are marked *

You might also like

error: Content is protected !!