Namipe padake bhavani

Composer : Shri Prasannavenkata dasaru

By Smt.Shubhalakshmi Rao

ನಮಿಪೆ ಪದಕೆ ಭವಾನಿ ಶಂಕರ [ಪ]
ಅಮರಗಣ ವಂದಿತನೆ ಮಾರಹರ [ಅ.ಪ]

ಕಾಮಹರನೆ ಉಮಾಮನೋಹರನೆ |
ವಾಮಮುನಿ ತನಯಾ ಮೃತ್ಯುಂಜಯ ||
ರಾಮನಾಮದ ಮಹಿಮೆ ಭಾಮೆಗೆ |
ನೇಮದಿಂದರುಹಿದಹೀಂದ್ರಪದ ಭಾಗ್ಯ [೧]

ಪರಾತ್ಪರನೆ ಪಂಚಾಕ್ಷರೀ ಜಪ |
ನಿರುತ ನಿರ್ವಂಚನೆಯಲಿ ಮಾಳ್ಪಗೆ ||
ದುರಿತ ತರಿದು ಕಂಚೀವರದನ |
ಅರಿವ ವಾಂಛಿತವೀವ ಸದಾಶಿವ [೨]

ಸದ್ಯೋಜಾತ ನೀ ಯೆನ್ನ ತಿದ್ದಿ |
ಮಧ್ವಮತದ ಪ್ರಬುದ್ಧ ತತ್ವದಿ |
ಶುದ್ಧಮತಿಯನೆಯಿತ್ತು ಸದ್ವೈಷ್ಣವರ |
ಮಧ್ಯದಿ ಬದುಕು ಮಾಡಿಸೋ ಹರ [೩]

ವಿಜ್ಞಾಪಿಸುವೆನು ಸುಜ್ಞಾನನಿಧಿ ಸ |
ರ್ವಜ್ಞರಾಯರ ಗ್ರಂಥ ಜ್ಞಾನ ಮ ||
ನೋಜ್ಞಮತಿಯೆನಗಿತ್ತು ಪ್ರಾಜ್ಞರ |
ನುಜ್ಞೆಯಲಿ ಬಾಳಿಸೋ ವಿಶ್ವಜ್ಞ ಸಖ [೪]

ದಕ್ಷನಳಿಯಾ ವಿರೂಪಾಕ್ಷನೆ |
ಶಿಕ್ಷಿಸೆನ್ನೊಳಗಿಹ ಪ್ರಕ್ಷಿಪ್ತಗಳ ||
ಪಕ್ಷಿಗಮನ ಪ್ರಸನ್ವೆಂಕಟನೀಕ್ಷಿಸಿ |
ರಕ್ತಿಪಂತೆ ಕೃಪೆದೋರು ಷಡಕ್ಟರೀ [೫]


namipe padake BavAni SaMkara [pa]
amaragaNa vaMditane mArahara [a.pa]

kAmaharane umAmanOharane |
vAmamuni tanayA mRutyuMjaya ||
rAmanAmada mahime BAmege |
nEmadiMdaruhidahIMdrapada BAgya [1]

parAtparane paMcAkSharI japa |
niruta nirvaMcaneyali mALpage ||
durita taridu kaMcIvaradana |
ariva vAMCitavIva sadASiva [2]

sadyOjAta nI yenna tiddi |
madhvamatada prabuddha tatvadi |
Suddhamatiyaneyittu sadvaiShNavara |
madhyadi baduku mADisO hara [3]

vij~jApisuvenu suj~jAnanidhi sa |
rvaj~jarAyara graMtha j~jAna ma ||
nOj~jamatiyenagittu prAj~jara |
nuj~jeyali bALisO viSvaj~ja saKa [4]

dakShanaLiyA virUpAkShane |
SikShisennoLagiha prakShiptagaLa ||
pakShigamana prasanveMkaTanIkShisi |
raktipaMte kRupedOru ShaDakTarI [5]

Leave a Reply

Your email address will not be published. Required fields are marked *

You might also like

error: Content is protected !!