Composer : Shri Prasannavenkata dasaru
ಈತ ನೋಡಿ ಸುಂದರೇಶ್ವರ ಭೂತನಾಥ ಮಾಹೇಶ್ವರಾ ||ಪ||
ಅತೀತ ಹರಿಗುಣ ಕಥಾ ಶ್ರವಣದ ಸುಖವನಿತ್ತಾ ಪಂಚವಕ್ತ್ರಾ ||ಅ.ಪ||
ಕಂತುಪಿತನಾ ಮಂತ್ರಿಯೆನಿಸಿ ಸಂತತವೂ ಸರ್ವಾಂತರಾತ್ಮನ |
ತಂತ್ರ ತಿಳಿದು ಅನಂತವಾದ ಜಗದ ಸಂತೆಯ ಕಾಣುವಂಥಾ ||೧||
ಈತ ಶುಕದೂರ್ವಾಸ ಜೈಗಿಷ ದ್ರೋಣಸುತ ಅಶ್ವತ್ಥಾಮಸಂಪ್ರತ ||
ತತುವನಾಥಾ ತಪವನಿರತ ಮಹಪದ ಮಹಾದೇವ ದೇವ ||೨||
ರಾಮದೇವ ವಾಸವಂದ್ಯ ಕಾಮಿತಾರ್ಥ ಪ್ರದಾಯಕಾ |
ಭಾಮೆ ಉಮೆಗೆ ರಾಮ ನಾಮದ ಮಹಿಮೆ ತಿಳಿಸಿದ ಹರಿಸಖಾ ||೩||
ಸಿದ್ಧವಿದ್ಯೆಲಿ ಸಿದ್ಧಹಸ್ತಾ ಶುದ್ಧ ಭಾವುಕ ಜನರ ಆಪ್ತಾ |
ಸಿದ್ದನಾಥ ಶ್ರೀಸಂಗಮೇಶ್ವರ ಎದ್ದು ನಿಂತಿಹ ಶಿವಸ್ವರೂಪಾ ||೪||
ಇಂದುಮೌಳಿ ತನ್ನ ನಂಬಿ ಬಂದ ಭಕುತ ಕಾಯ್ವ ಕಪಾಲಿ |
ಅಂದದಲಿ ಮೈನಾಕ ನಂದನೆಗ್ವರಿಸಿ ಜಗದಾನಂದನೆನಿಸಿದ ಶಿವ ||೫||
ಅನಳ ನೇತ್ರಾನಂದದಾತಾ ಅನಂತನಾಮನ ಪ್ರೀತಮಿತ್ರ |
ಮಮನಿಯಾಮಕನೆನಿಸಿ ಭೃತ್ಯರ ಚಿತ್ತಗುಣಿಸುವ ಚಿತ್ತಜಹರ ||೬||
ತ್ರಿಗುಣಾಕಾರಾ ತ್ರಿಪುರ ಮಥನಾ ತ್ರಿಲೋಕವಂದಿತ ಸಾಂಬರಮಣಾ |
ಭೋಗಿ ಭೂಷಣ ಭವದುರಿತಹನ ಭಾವ ಜ್ಞಾತವ್ಯಜ ರಾಮರಣಾ ||೭||
ವೀತಿಹೋತ್ರನೆ ವಿತ್ತಪತಿಸಖ ನಿತ್ಯ ತುತಿಪರ ಭಾಗ್ಯದಾತಾ |
ತತ್ತು ಜೀವರ ಜಿತ ಮದನ ಹರ ಪವಿತ್ರ ಪಾವನಚರಿತಾ ಖ್ಯಾತಾ ||೮||
ಶೇಷ ಪದಾರ್ಹಮರೇಂದ್ರ ವಂದ್ಯ ವಿಶೇಷ ವಸನವನುಟ್ಟ ದೇವಾ |
ವೃಷಭ ವಾಹನ ವಿಷವ ಸವಿದಾ ವಾಸುಕಿ ಭರಣಾನುಕೂಲಾ ||೯||
ಕುಧರಜಾಪತಿ ಕುಧರವಾಸಿ ಸದ್ಯೋಜಾತ ಸನ್ಮಹಿಮ ಶಿವಹರ |
ಶುದ್ಧ ಶುಚಿನಾಮಕನೆ ದೋಷದ ನಿಚಯವೆಣಿಸದೆ ಕಾಯ್ವಹರ ||೧೦||
ಭಾವಿ ವಿರಿಂಚಿ ಶೇಷನಲಿ ಜನಿಸಿದ ಮಹಾರುದ್ರಾಕ್ಷಗ ಶಿವಾ |
ಭಾವಿ ಶೇಷ ಸದಾಶಿವನೆ ಹರಿ ಭಕುತ ಪರಹೃನ್ಮಂದಿರಾ ||೧೧||
ನೀಲಕಂಧರ ನಿತ್ಯ ನಿರ್ಮಲ ಧ್ಯಾನ ಮಾಲಿ ಕಪಾಲಿ ಶೂಲಿ |
ಫಾಲನೇತ್ರ ವಿಶಾಲ ಚರಿತ ಹರಿಧ್ಯಾನರತ ಮಹಾದೇವ ಮಹಿತ ||೧೨||
ತ್ರಿಗುಣರೂಪಾ ತಪಪ್ರತಾಪಾ ಕುಜನ ಮತನಪರಿಮಿತ ಗುಣ |
ನಿಗಮವಂದ್ಯ ವೈರಾಗ್ಯಧಾರಕ ಕ್ಷೇಮ ಮಾರ್ಗ ಪ್ರೇರಕಾ ||೧೩||
ನರಗೆವಲಿದು ಘನ ಶರವನಿತ್ತಾನಾರೀಶ್ವರ ಶಿವಸಿದ್ದಲಿಂಗಾ |
ತ್ವರದೆ ಭೃಂಗಿಗೆ ವರವನಿತ್ತು ಕರುಣ ತೋರಿದ ಕರುಣಾಪಾಂಗಾ ||೧೪||
ತೈಜಸಾದಿತ್ರಿತತ್ವಗಾಥಾ ಮೃತ್ಯು ಕಳೆದ ಮೃತ್ಯುಂಜಯಜಯ |
ಸುಜನ ಮನಪ್ರಸನ್ವೇಂಕಟನ ಗುಣಕೀರ್ತಿ ಸಾರಿದ ಧವಳಕಾಯ ||೧೫||
Ita nODi suMdarESvara BUtanAtha mAhESvarA ||pa||
atIta hariguNa kathA SravaNada suKavanittA paMcavaktrA ||a.pa||
kaMtupitanA maMtriyenisi saMtatavU sarvAMtarAtmana |
taMtra tiLidu anaMtavAda jagada saMteya kANuvaMthA ||1||
Ita SukadUrvAsa jaigiSha drONasuta aSvatthAmasaMprata ||
tatuvanAthA tapavanirata mahapada mahAdEva dEva ||2||
rAmadEva vAsavaMdya kAmitArtha pradAyakA |
BAme umege rAma nAmada mahime tiLisida harisaKA ||3||
siddhavidyeli siddhahastA Suddha BAvuka janara AptA |
siddanAtha SrIsaMgamESvara eddu niMtiha SivasvarUpA ||4||
iMdumauLi tanna naMbi baMda Bakuta kAyva kapAli |
aMdadali mainAka naMdanegvarisi jagadAnaMdanenisida Siva ||5||
anaLa nEtrAnaMdadAtA anaMtanAmana prItamitra |
mamaniyAmakanenisi BRutyara cittaguNisuva cittajahara ||6||
triguNAkArA tripura mathanA trilOkavaMdita sAMbaramaNA |
BOgi BUShaNa Bavaduritahana BAva j~jAtavyaja rAmaraNA ||7||
vItihOtrane vittapatisaKa nitya tutipara BAgyadAtA |
tattu jIvara jita madana hara pavitra pAvanacaritA khyAtA ||8||
SESha padArhamarEMdra vaMdya viSESha vasanavanuTTa dEvA |
vRuShaBa vAhana viShava savidA vAsuki BaraNAnukUlA ||9||
kudharajApati kudharavAsi sadyOjAta sanmahima Sivahara |
Suddha SucinAmakane dOShada nicayaveNisade kAyvahara ||10||
BAvi viriMci SEShanali janisida mahArudrAkShaga SivA |
BAvi SESha sadASivane hari Bakuta parahRunmaMdirA ||11||
nIlakaMdhara nitya nirmala dhyAna mAli kapAli SUli |
PAlanEtra viSAla carita haridhyAnarata mahAdEva mahita ||12||
triguNarUpA tapapratApA kujana matanaparimita guNa |
nigamavaMdya vairAgyadhAraka kShEma mArga prErakA ||13||
naragevalidu Gana SaravanittAnArISvara SivasiddaliMgA |
tvarade bhRuMgige varavanittu karuNa tOrida karuNApAMgA ||14||
taijasAditritatvagAthA mRutyu kaLeda mRutyuMjayajaya |
sujana manaprasanvEMkaTana guNakIrti sArida dhavaLakAya ||15||
Leave a Reply