Linga en antaranga

Composer : Shri Vijayadasaru

By Smt.Shubhalakshmi Rao

ಲಿಂಗ ಎನ್ನಂತರಂಗ || ಪ ||
ಮಂಗಳಾಂಗ ಸರ್ವೋತ್ತುಂಗ ರಾಮ ||ಅ. ಪ.||

ಮಂದಾಕಿನೀಧರಗೆ ಗಂಗಾಂಬು ಮಜ್ಜನವೆ
ಚಂದ್ರಮೌಳಿಗೆ ಗಂಧ ಕುಸುಮದರ್ಪಣೆಯೆ
ಇಂದು ರವಿನೇತ್ರನಿಗೆ ಕರ್ಪೂರದಾರತಿಯೆ
ಕಂದರ್ಪಜಿತಗೆ ಮಿಗಿಲಾಪೇಕ್ಷೆಯೆ ||೧||

ಘನವಿದ್ಯಾತುರನಿಗೆ ಮಂತ್ರಕಲಾಪವೆ
ಧನಪತಿಯ ಸಖಗೆ ಕೈಕಾಣಿಕೆಯೆ
ಮನೆರಜತ ಪರ್ವತಗೆ ಫಣಿಯ ಆಭರಣವೆ
ಮನೋನಿಯಾಮಕಗೆ ಎನ್ನ ಬಿನ್ನಪವೆ || ೨ ||

ವೈರಾಗ್ಯನಿಧಿಗೆ ಈ ವಿಷಯ ಪದಾರ್ಥವೆ
ಗಿರಿಯೊಡತಿಯ ಪತಿಗೆ ಈ ಸ್ತೋತ್ರವೆ
ವೀರರಾಘವ ವಿಜಯವಿಠ್ಠಲನ ನಿಜಹಸ್ತ
ವಾರಿಜದಳದಿಂದ ನಿಲ್ಲಿಸಿದ ಶಿವ ಮಹಾ || ೩ ||


liMga ennaMtaraMga || pa ||
maMgaLAMga sarvOttuMga rAma ||a. pa.||

maMdAkinIdharage gaMgAMbu majjanave
caMdramauLige gaMdha kusumadarpaNeye
iMdu ravinEtranige karpUradAratiye
kaMdarpajitage migilApEkSheye ||1||

GanavidyAturanige maMtrakalApave
dhanapatiya saKage kaikANikeye
manerajata parvatage PaNiya ABaraNave
manOniyAmakage enna binnapave || 2 ||

vairAgyanidhige I viShaya padArthave
giriyoDatiya patige I stOtrave
vIrarAGava vijayaviThThalana nijahasta
vArijadaLadiMda nillisida Siva mahA || 3 ||

Leave a Reply

Your email address will not be published. Required fields are marked *

You might also like

error: Content is protected !!