Vrushabhanerida vishadhara

Composer : Shri Shripadarajaru

By Smt.Shubhalakshmi Rao

ವೃಷಭನೇರಿದ ವಿಷಧರನ್ಯಾರೆ ಪೇಳಮ್ಮಯ್ಯ |
ಹಸುಳೆ ಪಾರ್ವತಿಯ ತಪಸಿಗೆ ಮೆಚ್ಚಿದ
ಜಟಾ ಮಂಡಲಧಾರಿ ಕಣಮ್ಮ |ಪ|

ಕೈಲಾಸ ಗಿರಿಯ ದೊರೆಯಿವನಮ್ಮ |
ಅದು ಅಲ್ಲದೆ ಕೇಳೆ |
ಬೈಲು ಸ್ಮಶಾನದಿ ಮನೆಯಿವಗಮ್ಮ
ಸಂಕರುಷಣನೆಂದು |
ಕೇಳೆ ಮಹಿಯೊಳು ಜನ ಪೊಗಳುವರಮ್ಮ ,
ಇದು ನಿಜವಮ್ಮ |
ನಾಲಿಗೆ ಸಾಸಿರ ಫಣಿ ಭೂಷಣನಮ್ಮ,
ರಮೆಯರಸಗೆ ಇವ ಮೊಮ್ಮಗನಮ್ಮ |೧|

ಬಾಲೆ ದಾಕ್ಷಾಯಿಣಿ ಪತಿ ಇವನಮ್ಮ
ಮಾವನ ಯಾಗದಲಿ |
ಬ್ಹಾಳ ಕೃತ್ಯಗಳ ನಡೆಸಿದ ನಮ್ಮ
ಸಾಗರದಲ್ಲಿ ಹುಟ್ಟಿದ |
ಕಾಳ ಕೂಟವ ಭಕ್ಷಿಸಿದನಮ್ಮ |
ಇದು ರಾಮನ ದಯವಮ್ಮ |
ಮೇಲೆ ಉಳಿಯಲು ಶೇಷಗರಳವು |
ನೀಲ ಕಂಠನೆಂದೆನಿಸಿದನಮ್ಮ | ೨ |

ಹರನೊಂದಿನ ವೈಕುಂಠಕೆ ಬರಲು
ತಾತಗೆ ವಂದಿಸುತ |
ತರುಣಿ ರೂಪವ ನೋಡೆನೆನಲು ,
ಹರಿ ತಾ ನಸು ನಗುತ |
ಕರೆದು ಸೈರಿಸಲಾರೆ ನೀ ಎನಲು |
ಹಠದಿ ಕುಳ್ಳಿರಲು |
ಕರುಣಿಗಳರಸನು ಹರನ ಮೊಗವನೊಡ್
ಅರುಣೋದಯಕೆ ಬಾರೆಂದು ಕಳುಹಿದ | ೩|

ಅರುಣೋದಯಕೆ ಗಂಗಾಧರ ಬರಲು |
ಹದಿನಾರು ವರುಷದ ತರುಣಿ ರೂಪದಿ
ಹರಿ ವನದೊಳಗಿರಲು |
ಚರಣ ನಖಾಗ್ರದಿ ಧರಣಿ ಬರೆಯುತ್ತಾ
ನಿಂತಿರಲು, ಸೆರಗ ಪಿಡಿಯೆ ಬರಲು |
ಹರ ತಾ ಸರೆಗ ಪಿಡಿಯೆ ಬರಲು |
ಕರದಿ ಶಂಖ ಗಧೆ ಚಕ್ರವ ತೋರಲು
ಹರನು ನಾಚಿ ತಲೆ ತಗ್ಗಿಸಿ ನಿಂತ | ೪ |

ಮಂಗಳಾಂಗನೆ ಮಾರಜನಕನೆ
ನಾ ಮಾಡಿದ ತಪ್ಪ
ಹಿಂಗದೆ ಕ್ಷಮಿಸೋ ಯದುಕುಲ ತಿಲಕ ,
ವಕ್ಷದಲೊಪ್ಪುವ |
ನಿನ್ನಂಗನೆ ಅಹಿಯೊಳು ನಖ ಮಹಿ ಮಾಂಕ
ಹೀಗೆನುತಲಿ ತವಕ |
ರಂಗ ವಿಠ್ಠಲನ ಪದಂಗಳ ಪಿಡಿದು
ಸಾಷ್ಟಾಂಗ ವೆರಗಿ ಕೈಲಾಸಕ್ಕೆ ನಡೆದ | ೫ |


vRuShaBanErida viShadharanyAre pELammayya |
hasuLe pArvatiya tapasige meccida
jaTA maMDaladhAri kaNamma |pa|

kailAsa giriya doreyivanamma |
adu allade kELe |
bailu smaSAnadi maneyivagamma
saMkaruShaNaneMdu |
kELe mahiyoLu jana pogaLuvaramma,
idu nijavamma |
nAlige sAsira PaNi BUShaNanamma,
rameyarasage iva mommaganamma |1|

bAle dAkShAyiNi pati ivanamma
mAvana yAgadali |
b~hALa kRutyagaLa naDesida namma
sAgaradalli huTTida |
kALa kUTava BakShisidanamma |
idu rAmana dayavamma |
mEle uLiyalu SEShagaraLavu |
nIla kaMThaneMdenisidanamma | 2 |

haranoMdina vaikuMThake baralu
tAtage vaMdisuta |
taruNi rUpava nODenenalu
hari tA nasu naguta |
karedu sairisalAre nI enalu |
haThadi kuLLiralu |
karuNigaLarasanu harana mogavanoD
aruNOdayake bAreMdu kaLuhida | 3|

aruNOdayake gaMgAdhara baralu |
hadinAru varuShada taruNi rUpadi
hari vanadoLagiralu |
caraNa naKAgradi dharaNi bareyuttA
niMtiralu, seraga piDiye baralu |
hara tA sarega piDiye baralu |
karadi SaMKa gadhe cakrava tOralu
haranu nAci tale taggisi niMta | 4 |

maMgaLAMgane mArajanakane
nA mADida tappa
hiMgade kShamisO yadukula tilaka
vakShadaloppuva |
ninnaMgane ahiyoLu naKa mahi mAMka
hIgenutali tavaka |
raMga viThThalana padaMgaLa piDidu
sAShTAMga veragi kailAsakke naDeda | 5 |

Leave a Reply

Your email address will not be published. Required fields are marked *

You might also like

error: Content is protected !!