Composer : Shri Prasannavenkata dasaru
ನಗದಿರಬಹುದೆ ಗಗನಕೇಶ ನಿನ್ನ |
ಈಗತಿಗೆ ಜಗ ಜನ ಗಹಗಹಿಸಿ [ಪ]
ವಿಗಡಮುನಿ ಮಾತಿಗೆ ಗಿರಿರಾಜ ತನ್ನ
ಮಗಳ ಕೊಟ್ಟು ಬೀಗತನ ಬೆಳಿಸಿ ||
ಜಗಕೆ ಮೊಗ ತೋರಿಸಲಾಗದಿಹ ನಿನ್ನ |
ಅಗಣಿತ ಚರಿತೆ ಮಿಗಿಲಾಗಿರಲು [೧]
ಮನೆಯೆಂಬುದಿಲ್ಲ ವುಡಲೊಸನಿಲ್ಲ |
ತನು ಪೂರಣ ಬೂದಿ ಬಳಿದಿಹ ಮೈ ||
ತಿನ್ನಲನ್ನವಿಲ್ಲದೆ ದಿನ ದಿನ ಭಿಕ್ಷೆಯೆತ್ತುತ |
ಮನೆ ಮನೆ ತಿರುಗುವ ಜೋಗಿಯ ಕಂಡು [೨]
ನೆತ್ತಿಯೊಳ್ನಿರ್ಹೊತ್ತಿಹ ಕೃತ್ತಿಕಾಪತಿಯೆ |
ಸುತ್ತಿ ಚರ್ಮ ಮೈ ಮುಚ್ಚಿಕೊಂಡರೆ ||
ಗೊತ್ತಾಗದೇನೋ ತತ್ತುಮಜಗಕೆ |
ಸ್ವೋತ್ತಮ ಸಿರಿಪ್ರಸನ್ವೆಂಕಟ ಸಖನೆ [೩]
nagadirabahude gaganakESa ninna |
Igatige jaga jana gahagahisi [pa]
vigaDamuni mAtige girirAja tanna
magaLa koTTu bIgatana beLisi ||
jagake moga tOrisalAgadiha ninna |
agaNita carite migilAgiralu [1]
maneyeMbudilla vuDalosanilla |
tanu pUraNa bUdi baLidiha mai ||
tinnalannavillade dina dina BikSheyettuta |
mane mane tiruguva jOgiya kaMDu [2]
nettiyoLnirhottiha kRuttikApatiye |
sutti carma mai muccikoMDare ||
gottAgadEnO tattumajagake |
svOttama siriprasanveMkaTa saKane [3]
Leave a Reply