Composer : Shri Prasannavenkata dasaru
ಆವನಿಶಿವ ಭವದಘ ತರಿವಾ ಮಾ |
ಧವನಲಿ ಮನ ನಿಲ್ಲಿಸಿ ಪೊರೆವಾ [ಪ]
ಮುಷ್ಟುರಹರ ಮಹಾದೇವ ಶಂಕರಾ |
ಸರ್ಪಭೂಷಣ ಗಜಚರ್ಮಾಂಬರಧರಾ
ಸಪದಿಜಾತ ರಿಪು ಘೋರ ಹರಾಹರ |
ತ್ರಿಪಥಗಾಪತಿ ಕಪಾಲ ಮತಿಪ್ರಮತಿ [೧]
ಶರಕ್ಷುವರ ರಸಾಘನ ರಸಾನಲಾನಿಲ |
ಪುರ ತ್ರಿಪುರರಂಧನತಿ ಪರಾಕ್ರಮ ||
ಹರಿಪರ ಪಕ್ಷ ಲಕ್ಷಾನುಕಂಪನ ಸದಾ |
ಹರಹರಹರಾ ತವ ಹರಹರಾಂತರೀಯಾ [೨]
ಸಾಂಬರಮಣ ಹೇರಂಬಪಿತ |
ಗಂಬೂರಂಗದ ಗಂಭೀರ ಲಿಂಗಾ ||
ತುಂಬರು ನಾರದಂಬೋಜುಗಾನ |
ಸಂಭ್ರಮಣ ಜಗದಂಬಿಕಾರಮಣ [೩]
ಇಂದ್ರಾದ್ಯಮರ ವಂದಿತ ಚಂದ್ರಶೇಖರ |
ಇಂದುಮಂಡಲ ಮಧ್ಯಸ್ಥ ಸ್ಕಂದಗಣಪಿತ ||
ವೃಂದಾರಕ ವೃಂದಸ್ತುತ ಸದಾನಂದೈಕ |
ನಂದಿಗಮನ ಗೋವಿಂದ ಭಜಕ ಶ್ರೀ [೪]
ಸ್ಪಟಿಕ ಸಂಕಾಶ ದ್ವಾದಶ ನಾಮ ವಿಶೇಷ |
ನಿಟಿಲನೇತ್ರ ಸ್ಪುಟಿತ ಹಾಟಕ ಶ್ರೀಜಟ ||
ಸ್ಪುಟ ಸಮ್ಮೋಹನ ಪ್ರಸನ್ವೆಂಕಟಪತಿ |
ಆಟವರಿತ ದಿಟಯೋಗಿ ಹಠ ಶಂಕರ [೫]
AvaniSiva BavadaGa tarivA mA |
dhavanali mana nillisi porevA [pa]
muShTurahara mahAdEva SaMkarA |
sarpaBUShaNa gajacarmAMbaradharA
sapadijAta ripu GOra harAhara |
tripathagApati kapAla matipramati [1]
SarakShuvara rasAGana rasAnalAnila |
pura tripuraraMdhanati parAkrama ||
haripara pakSha lakShAnukaMpana sadA |
haraharaharA tava haraharAMtarIyA [2]
sAMbaramaNa hEraMbapita |
gaMbUraMgada gaMBIra liMgA ||
tuMbaru nAradaMbOjugAna |
saMBramaNa jagadaMbikAramaNa [3]
iMdrAdyamara vaMdita caMdraSEKara |
iMdumaMDala madhyastha skaMdagaNapita ||
vRuMdAraka vRuMdastuta sadAnaMdaika |
naMdigamana gOviMda Bajaka SrI [4]
spaTika saMkASa dvAdaSa nAma viSESha |
niTilanEtra spuTita hATaka SrIjaTa ||
spuTa sammOhana prasanveMkaTapati |
ATavarita diTayOgi haTha SaMkara [5]
Leave a Reply