Composer : Shri Prasannavenkata dasaru
ಇಂದುಧರ ಬಲು ಸುಂದರೇಶ್ವರ |
ಸುಂದರಾಕ್ಷಿಯ ಹೃದಯ ಮಂದಿರ [ಪ]
ಇಂದು ಈ ಪದದ್ವಂದ್ವ ನಂಬಿದೆ |
ಇಂದಿರೇಶನ ತೋರೋ ತಂದೆ [ಅ.ಪ]
ರಾಯನವನುತಿ ಮಾಡಿ ಮೆರೆದಾ
ಕಾಯೇಂದ್ರಿಯ ಮನವಾಹಕಾ ||
ಕಾಯೋ ಈ ಪದ ತೋಯಜಕೆರಗುವೆ |
ಮಾಯಾರಮಣನುಪಾಯ ಬಲ್ಲವ [೧]
ಸಂತಮನ ಅನಂತ ಮಹಿಮಾ |
ಅಂತಕನ ಗೆದ್ದತೀಂದ್ರಿಯ ಶಿವಾ ||
ದಂತಿಚರ್ಮವ ಪೊದ್ದ ದೇವಾ |
ಅಂತರಿಕ್ಷ ನಗರ ತ್ರಯಹರ [೨]
ತೀರ್ಥನದಿಯನು ಪೊತ್ತ ಈಶಾ |
ತೀರ್ಥಾರ್ಥಿಯರ ಕ್ಲೇಶನಾಶಾ ||
ತೀರ್ಥಪಾದ ಪ್ರಸನ್ನವೆಂಕಟ – |
ನರ್ಥಿಯಿಂದಲಿ ಪೊಂದಿದಮರ [೩]
iMdudhara balu suMdarESvara |
suMdarAkShiya hRudaya maMdira [pa]
iMdu I padadvaMdva naMbide |
iMdirESana tOrO taMde [a.pa]
rAyanavanuti mADi meredA
kAyEMdriya manavAhakA ||
kAyO I pada tOyajakeraguve |
mAyAramaNanupAya ballava [1]
saMtamana anaMta mahimA |
aMtakana geddatIMdriya SivA ||
daMticarmava podda dEvA |
aMtarikSha nagara trayahara [2]
tIrthanadiyanu potta ISA |
tIrthArthiyara klESanASA ||
tIrthapAda prasannaveMkaTa – |
narthiyiMdali poMdidamara [3]
Leave a Reply