Manadadhipa more hokke

Composer : Shri Jayesha Vittala

By Smt.Shubhalakshmi Rao

ಮನದಧಿಪ ಮೊರೆಹೊಕ್ಕೆ ಮಹದೇವ ಪಾಹಿ [ಪ]
ತೃಣ ಮೊದಲು ಘನದಲ್ಲಿ ಬಿಡದೆ ಹರಿಯನು ಭಜಿಪ [ಅ.ಪ]

ಕರುಣಾಬ್ಧಿ ನೀಡೆನಗೆ ವೈರಾಗ್ಯ ಮಹಭಾಗ್ಯ
ಪರಮ ಭಾಗವತ ಪದ ನಿನ್ನದಯ್ಯ
ಮರುದಂಘ್ರಿ ಕಮಲ ಮಧು ಮತ್ತ ಷಟ್ಪದ ದೊರೆಯೇ
ಸರ್ವತ್ರ ನಿನ್ನಲ್ಲಿ ಹರಿಯ ತೋರಿಸಿ ಸಲಹೊ [೧]

ಆಪ್ತತಮ ನಿನ್ನಂಘ್ರಿ ಧ್ಯಾನದಲಿ ಇಡು ಎನ್ನ
ತೃಪ್ತಿ ಅನ್ಯದಿ ಬ್ಯಾಡ ಸುಪ್ತಿರಹಿತ
ಸಪ್ತೆರಡು ಭಕ್ತಿಯಲಿ ಬೆಳೆಸೆನ್ನ ಉದ್ಧರಿಸು
ಪ್ರಾಪ್ತಿ ಪಾಲಿಸು ಬಿಂಬ ಮೂರ್ತಿ ದರುಶನ ಭೋಗ [೨]

ಮಾರುತಿಯ ಕೈಗಿತ್ತುದಾರ ಸಾಗರ ಶಂಭೊ
ಘೋರ ಭವಹರ ಹರಿಯ ದಾಸವರ್ಯ
ಮಾರಮಣ ಜಯೇಶವಿಠ್ಠಲನ ಭಜನೆಯಲಿ
ಧೀರ ದಿವಿಜರ ದೊರೆಯೆ ಸಾರ ಸುಖ ನೀಡೆನಗೆ [೩]


manadadhipa morehokke mahadEva pAhi [pa]
tRuNa modalu Ganadalli biDade hariyanu Bajipa [a.pa]

karuNAbdhi nIDenage vairAgya mahaBAgya
parama BAgavata pada ninnadayya
marudaMGri kamala madhu matta ShaTpada doreyE
sarvatra ninnalli hariya tOrisi salaho [1]

Aptatama ninnaMGri dhyAnadali iDu enna
tRupti anyadi byADa suptirahita
sapteraDu Baktiyali beLesenna uddharisu
prApti pAlisu biMba mUrti daruSana BOga [2]

mArutiya kaigittudAra sAgara SaMBo
GOra Bavahara hariya dAsavarya
mAramaNa jayESaviThThalana Bajaneyali
dhIra divijara doreye sAra suKa nIDenage [3]

Leave a Reply

Your email address will not be published. Required fields are marked *

You might also like

error: Content is protected !!