Composer : Shri Janardana vittala
ಅಂಬುಜಾಕ್ಷನ ತೋರೋ ಜಂಬುನಾಥ
ಅಂಬಿಕಾಪತಿ ಎನ್ನ ಅರೆಮರೆಯಗೊಳಿಸದಲೆ ||ಪ||
ಸತ್ಯಲೋಕಾಧಿಪನ ಹತ್ತಲಿ ಹಗಲಿರುಳು
ಹೊತ್ತು ಬಿಡದೆ ಕಾರ್ಯ ಮಾಳ್ಪ ಮಂತ್ರೀ
ನಿತ್ಯದಲಿ ಮರ್ತ್ಯಲೋಕದಲ್ಲಿ ಎನಗಿಂದೂ
ತಾತ್ವ ವಿಚಾರ ಮಾಳ್ಪದಕ ಮನವನೆ ಕೊಟ್ಟು ||೧||
ಆದಿಯಿಂದಲಿ ಮೋದ ಕೊಡುತಲಿ ಭಕುತರಿಗೆ
ವೇದೋಕ್ತ ಪುರಾಣ ಶಾಸ್ತ್ರರ್ಥದೀ
ಮಾಧವನಾ ಮನದಲ್ಲಿ ಮಹಿಯೊಳಗೆ ನಿಲಿಸಿದ್ದೆ
ಸಾಧಿಸೆನ್ನಯ ಬುದ್ಧಿಗಭಿಮಾನಿದೊಡಿಯಾ ||೨||
ಮಂಗಳವೇ ಪಾಲಿಸೋ ಗಂಗಾಧರನೆ ಎನಗೆ
ಅಂಗೀಕಾರನ ಮಾಡಿ ಕುಂಭಿಣಿಯೊಳು
ಸಂಗೀತಲೋಲ ಜನಾರ್ದನವಿಠಲನ
ಅಂಗದಲಿ ಪುಟ್ಟಿದಜನಾ ಪುತ್ರ ಗುರುರಾಯ ||೩||
aMbujAkShana tOrO jaMbunAtha
aMbikApati enna aremareyagoLisadale ||pa||
satyalOkAdhipana hattali hagaliruLu
hottu biDade kArya mALpa maMtrI
nityadali martyalOkadalli enagiMdU
tAtva vicAra mALpadaka manavane koTTu ||1||
AdiyiMdali mOda koDutali Bakutarige
vEdOkta purANa SAstrarthadI
mAdhavanA manadalli mahiyoLage nilisidde
sAdhisennaya buddhigaBimAnidoDiyA ||2||
maMgaLavE pAlisO gaMgAdharane enage
aMgIkArana mADi kuMBiNiyoLu
saMgItalOla janArdanaviThalana
aMgadali puTTidajanA putra gururAya ||3||
Leave a Reply