Composer: Shri Bannanje Govindacharya on Shri Narayana Panditacharya
ನಾರಾಯಣಪಂಡಿತಾಚಾರ್ಯರ ಕುರಿತು ಗುರುಗಳಾದ
ಬನ್ನಂಜೆ ಗೋವಿಂದಪಂಡಿತಾಚಾರ್ಯರು ರಚಿಸಿದ ಹಾಡು !
ಅಪ್ಪನಿಗೆ ತಕ್ಕ ಮಗನೀತ
ನವೋನವನೀತ ನವನೀತ [ಪ]
ಸೂರ್ಯನನು ತೋರಿಸಲು ಹಣತೆಯನು ಹಚ್ಚಿದನು
ತಂದೆ ತೋರಿದ ದಾರಿ ನಂಬಿ ನಡೆದವನು
ಸಾಸಿವೆಯ ಕಾಳಲ್ಲಿ ಕುಂಬಳವ ತುಂಬಿದನು
ಪುಟ್ಟ ದೋಣಿಯಲಿ ಕಡಲ ದಾಟಿದವನು [೧]
ಇತಿಹಾಸ ಕಂಡಿರುವ ಮೊದಲ ಜೀವನ ಚರಿತ
ನಿನ್ನದೇ ಶ್ರೀ ಮಧ್ವ ವಿಜಯದಿರಿತ
ನಿನ್ನ ನಿಷ್ಠುರದ ನುಡಿ ಅಲಗು ಬಲು ಹರಿತ
ಸಿಪ್ಪೆ ಸುಲಿದರೆ ಹಲಸು ಒಳಗೆ ರಸಭರಿತ [೨]
ತ್ರೈವಿಕ್ರಮಾರ್ಯ ನೀ ನಯಚಂದ್ರಿಕಾಚಾರ್ಯ
ತತ್ತ್ವದೀಪನ ಮಗನು ಯೋಗದೀಪ
ಪ್ರವಚನದ ಚಾತುರ್ಯ ಕಾವ್ಯ ಮಾಧುರ್ಯ
ಕಡಲ ತೀರದಲೊಂದು ತೋರು ದೀಪ [೩]
ಅಪ್ಪನಿಗೆ ತಕ್ಕ ಮಗನೀತ………
nArAyaNapaMDitAcAryara kuritu gurugaLAda
bannaMje gOviMdapaMDitAcAryaru racisida hADu !
appanige takka maganIta
navOnavanIta navanIta [pa]
sUryananu tOrisalu haNateyanu haccidanu
taMde tOrida dAri naMbi naDedavanu
sAsiveya kALalli kuMbaLava tuMbidanu
puTTa dONiyali kaDala dATidavanu [1]
itihAsa kaMDiruva modala jIvana carita
ninnadE SrI madhva vijayadirita
ninna niShThurada nuDi alagu balu harita
sippe sulidare halasu oLage rasaBarita [2]
traivikramArya nI nayacaMdrikAcArya
tattvadIpana maganu yOgadIpa
pravacanada cAturya kAvya mAdhurya
kaDala tIradaloMdu tOru dIpa [3]
appanige takka maganIta………
Leave a Reply