Composer : Shri Badarayana vittala on Shri Vadirajaru
ದಿಕ್ಕುದೆಸೆ ನೀನೇ ಗುರು ವಾದಿರಾಜ |ಪ|
ಇಕ್ಕೋ ಈ ದೇಹವನು ನಿನಗರ್ಪಿಸಿದೆನೊ |ಅಪ|
ಇನ್ನೊಬ್ಬರಿಗೆ ನಾನು ಶರಣೆನ್ನಲಾರೆನು
ನಿನ್ನಡಿಗೆ ಕೊರಳ ಕಟ್ಟಿದೆನು ಸತ್ಯ ||
ಅನ್ಯಾಯ ನ್ಯಾಯಗಳ ಬಲ್ಲ ಮಹಿಮನು ನೀನು |
ನಿನ್ನ ನಂಬಿದ ಮೇಲೆ ಕೆಡಿಸುವವ ನೀನಲ್ಲ |೧|
ಆರಾರಿಗಾಲ್ಪರಿದ ರಾರೇನ ಮಾಡುವರು |
ಧೀರ ವಾಗೀಶ ಕರಕಮಲ ಜಾತ |
ಧಾರುಣಿಯ ಮೇಲಿನ್ನು ನಿನ್ನಂತ ಕರುಣಿಗಳ
ಆರಾರಿಸಿ ಹುಡುಕಿದರು ನಾಕಾಣೆ ಎನ್ನಾಣೆ |೨|
ವೇದ ವೇದ್ಯಾಚಾರ್ಯ ವಂದಿತ ಪದಾಂಬೋಜ
ಸಾಧುಕುಲ ತಿಲಕ ಸರ್ವಜ್ಞ ಮುನಿಯೇ ||
ಶ್ರೀಧವಳ ಗಂಗಾ ತಟ ನಿಲಯ ಸಲಹೆಮ್ಮ
ಬಾದರಾಯಣ ವಿಠಲ ಭಕ್ತಾಗ್ರಣಿಯೇ ಎಮಗೆ |೩|
dikkudese nInE guru vAdirAja |pa|
ikkO I dEhavanu ninagarpisideno |apa|
innobbarige nAnu SaraNennalArenu
ninnaDige koraLa kaTTidenu satya ||
anyAya nyAyagaLa balla mahimanu nInu |
ninna naMbida mEle keDisuvava neenalla |1|
ArArigAlparida rArEna mADuvaru |
dhIra vAgISa karakamala jAta |
dhAruNiya mElinnu ninnaMta karuNigaLa
ArArisi huDukidaru nAkANe ennANe |2|
vEda vEdyAcArya vaMdita padAMbOja
sAdhukula tilaka sarvaj~ja muniyE ||
SrIdhavaLa gaMgA taTa nilaya salahemma
bAdarAyaNa viThala BaktAgraNiyE emage |3|

Leave a Reply
You must be logged in to post a comment.