Badarayana padakeragideno

Composer : Shri Vidyaprasanna Tirtharu

By Smt.Shubhalakshmi Rao

ಬಾದರಾಯಣ ಪಾದಕೆರಗಿದೆನೊ (ಪ)

ನೀದಯದಿ ಕಾಮಕ್ರೋಧಗಳನೆ ಬಿಡಿಸಿ
ಸಾಧು ಕರ್ಮದಲಿ ಆದರವೀಯೊ (ಅ.ಪ)

ಜ್ಞಾನಿ ಗೌತಮ ಮೌನಿ ಶಾಪದಿಂದ
ಜ್ಞಾನಿಗಳಿಗೆ ಅಜ್ಞಾನತೆ ಬರಲು
ದೈನ್ಯದಲಿ ಚತುರಾನನಾದಿಗಳು
ನೀನೆ ಗತಿಯೆನಲು ಮಾನಿಸಿದ ಸುಖಾತ್ಮ [೧]

ತಾಪಸೋತ್ತಮ ಆ ಪರಾಶರರು
ದ್ವೀಪದಲ್ಲಿರಲು ನೀ ಪವಳಿಸಿದೆ
ಶಾಪದಿಂದ ಕ್ರಿಮಿರೂಪ ಪೊಂದಿದವಗೆ
ಭೂಪತನವನಿತ್ತ ದ್ವೈಪಾಯನಾಖ್ಯ [೨]

ಶೃತಿಗಳರ್ಥ ಮಂದಮತಿಗಳರಿಯದಿರೆ
ಹಿತದಿ ಬ್ರಹ್ಮಸೂತ್ರ ತತಿಗಳನ್ನೆ ರಚಿಸಿ
ಅತುಲವಾದ ಭಾಗವತ ವರ ಮಹಾಭಾ-
ರತಗಳನ್ನು ರಚಿಸಿ ಅತಿ ಪ್ರಸನ್ನರಾದ [೩]


bAdarAyaNa pAdakeragideno (pa)

nIdayadi kAmakrOdhagaLane biDisi
sAdhu karmadali AdaravIyo (a.pa)

j~jAni gautama mauni SApadiMda
j~jAnigaLige aj~jAnate baralu
dainyadali caturAnanAdigaLu
nIne gatiyenalu mAnisida suKAtma [1]

tApasOttama A parASararu
dvIpadalliralu nI pavaLiside
SApadiMda krimirUpa poMdidavage
BUpatanavanitta dvaipAyanAKya [2]

SRutigaLartha maMdamatigaLariyadire
hitadi brahmasUtra tatigaLanne racisi
atulavAda BAgavata vara mahABA-
ratagaLannu racisi ati prasannarAda [3]

Leave a Reply

Your email address will not be published. Required fields are marked *

You might also like

error: Content is protected !!