Hottege hittilla

Composer : Shri Vidyaprasanna Tirtharu

By Smt.Shubhalakshmi Rao

ಹೊಟ್ಟೆಗೆ ಹಿಟ್ಟಿಲ್ಲ ನಿನ್ನಯ
ಜುಟ್ಟಿಗೆ ಮಲ್ಲಿಗೆಯು [ಪ]

ಉಟ್ಟಿರುವುದು ಶತಛಿದ್ರದ ವಸ್ತ್ರವು
ತೊಟ್ಟಿರುವುದು ಜರತಾರಿಯ ಅಂಗಿಯು [ಅ.ಪ]

ಮಾತೆಯ ಗರ್ಭದಲಿ ವಿಧ ವಿಧ
ಯಾತನೆಯನನು ಭವಿಸಿ
ಭೂತಲದಲಿ ಮದಮತ್ಸರ ಲೋಭಕೆ
ಸೋತು ಮನವ ನಿರ್ಭೀತಿಯಿಂದಿರುವೆಯೊ [೧]

ದಿನಗಳು ಕಳೆಯುತಿರೆ ಲೋಕದ
ಪ್ರಣಯವು ಹೆಚ್ಚುತಿದೆ
ತನಯ ತರುಣಿ ಮನೆ ಕನಕಗಳೆಲ್ಲವು
ಕನಸಿನ ತೆರದಲಿ ಕ್ಷಣಿಕವೆಂದರಿಯದೆ [೨]

ಇದು ನನ್ನದೆಂಬ ಅನುಭವ
ಮಂಗನ ಹಿಗ್ಗಟೆಯು
ಇಂದಿರೆಯರಸನ ಪರಮ ಪ್ರಸನ್ನತೆ
ಪೊಂದಿದ ಪುರುಷನೆ ಜೀವನ್ಮುಕ್ತನು [೩]


hoTTege hiTTilla ninnaya
juTTige malligeyu [pa]

uTTiruvudu SataCidrada vastravu
toTTiruvudu jaratAriya aMgiyu [a.pa]

mAteya garBadali vidha vidha
yAtaneyananu Bavisi
BUtaladali madamatsara lOBake
sOtu manava nirBItiyiMdiruveyo [1]

dinagaLu kaLeyutire lOkada
praNayavu heccutide
tanaya taruNi mane kanakagaLellavu
kanasina teradali kShaNikaveMdariyade [2]

idu nannadeMba anuBava
maMgana higgaTeyu
iMdireyarasana parama prasannate
poMdida puruShane jIvanmuktanu [3]

Leave a Reply

Your email address will not be published. Required fields are marked *

You might also like

error: Content is protected !!