Entha mahima balavanta

Composer : Shri Harapanahalli Bheemavva

By Smt.Shubhalakshmi Rao

ಎಂಥ ಮಹಿಮ ಬಲವಂತ ನಮ್-ಹನುಮಂತ
ನಿಂತು ನೀ ಸಲಹೋ ನಿರಂತರದಲ್ಲೆನ್ನ [ಪ]

ರಾಮರುಂಗುರ ಸೀತಗಿಟ್ಟು ಮರವ ಕಿತ್ತಿ
ಸೂ-ರಿ ಮಾಡ್ಯಕ್ಷಕುಮಾರನ್ನ ಗೆಲಿದು
ರಾವಣೇಶನ ಲಂಕಾ ದ್ವೀಪಕೆ ದೀಪಗಳ್-ಹಚ್ಚಿ
ಹಾರಿದ್-ವಾರಿಧಿ ವಾರ್ತಿ ಹರಿಗೆ ಬಂದರುಹಿದ [೧]

ಭೀಮಶಯನವತಾರ ಮಾಡಿ ತಾ ಪಾಂಚಾಲಿ
ಕೂಡಿ ಕೊಂಡ್-ವನವಾಸ ಚರಿಸಿ ಬಂದು
ಕ್ರೂರ ಕುರುಪತಿ ಕುಲಕಂತಕ-ನೆಂದರಸನ ಪಟ-
ರಾಜ್ಞಿ ದ್ರೌಪದಿ ಧರ್ಮರಾಜ-ಗೊಂದಿಸಿದನು [೨]

ಮಾಯಾವಾದಿಯ ಮುರಿದೊತ್ತಿದ ತಾ ಮಧ್ವ-
ರಾಯರಾಗಿ ರಜತ ಪೀಠ ಪುರದಲ್ಲಿ
ಭೀಮೇಶ ಕೃಷ್ಣನ ನಿಲಿಸಿ ಬಂದೀ ಬೊಮ್ಮ
ಗ್ರಾಮದಿ ನಿಂತನೆ ಸೀತಾರಾಮರ ಸಹಿತವಾಗಿ [೩]


eMtha mahima balavaMta nam-hanumaMta
niMtu nI salahO niraMtaradallenna [pa]

rAmaruMgura sItagiTTu marava kitti
sU-ri mADyakShakumAranna gelidu
rAvaNESana laMkA dvIpake dIpagaL-hacci
hArid-vAridhi vArti harige baMdaruhida [1]

BImashayanavatAra mADi tA pAMcAli
kUDi koMD-vanavAsa carisi baMdu
krUra kurupati kulakaMtaka-neMdarasana paTa-
rAj~ji draupadi dharmarAja-goMdisidanu [2]

mAyAvAdiya muridottida tA madhva-
rAyarAgi rajata pITha puradalli
BImESa kRuShNana nilisi baMdI bomma
grAmadi niMtane sItArAmara sahitavAgi [3]

Leave a Reply

Your email address will not be published. Required fields are marked *

You might also like

error: Content is protected !!