Composer : Shri Vidyaprasanna tirtharu
ಮುರಲಿಯ ನಾದವ ಕೇಳಿ ಬನ್ನಿ ||ಪ||
ಮುರಲಿಯ ನಾದವ ಕೇಳಿ ||ಅ.ಪ||
ಮದುರಾನಾಥನು ಮುರಲಿಯನೂದಲು
ಸುರಿವುದಾನಂದಜಲ ನಯನದಲಿ ||೧||
ಕಂಗೊಳಿಸುವ ಬೆಳದಿಂಗಳ ಸೊಬಗಿಲಿ
ತಂಗಾಳಿಯ ಸುಖದಿ ಶ್ರೀರಂಗನ || ೨||
ಶ್ಯಾಮಲಾಂಗನು ತನ್ನ ಕೋಮಲ ಕರದಲಿ
ಆ ಮುರಲಿಯ ಪಿಡಿಯೆ ಹೃದಯದಲಿ
ಪ್ರೇಮವು ತುಂಬುವುದು ||೩||
ಪಂಚಬಾಣನ ಪಿತ ಮುರಲಿಯ ಮಧುರಸ
ಹಂಚಲೆಮಗೆ ರೋಮಾಂಚವಾಗುವುದು ||೪||
ರಜನೀಕಾಂತನ ಕುಲದಲಿ ಜನಿಸಿ
ವ್ರಜಜನಗಳಿಗಧಿಕ ಪ್ರಸನ್ನನ ||೫||
muraliya nAdava kELi banni ||pa||
muraliya nAdava kELi ||a.pa||
madurAnAthanu muraliyanUdalu
surivudAnaMdajala nayanadali ||1||
kaMgoLisuva beLadiMgaLa sobagili
taMgALiya suKadi SrIraMgana || 2||
SyAmalAMganu tanna kOmala karadali
A muraliya piDiye hRudayadali
prEmavu tuMbuvudu ||3||
paMcabANana pita muraliya madhurasa
haMcalemage rOmAMcavAguvudu ||4||
rajanIkAMtana kuladali janisi
vrajajanagaLigadhika prasannana ||5||
Leave a Reply