Composer : Shri Vijayadasaru
ಪವಮಾನ ಪವಮಾನ
ಪವಮಾನ ಜಗದಪ್ರಾಣ ಸಂಕರುಷಣ
ಭವಭಯಾರಣ್ಯ ದಹನಾ, ಪವನ ||ಪ||
ಶ್ರವಣವೆ ಮೊದಲಾದ ನವವಿಧ ಭಕುತಿಯ |
ತವಕದಿಂದಲಿ ಕೊಡು ಕವಿಜನ ಪ್ರಿಯ ||ಅ.ಪ||
ಹೇಮಕಚ್ಚುಟ ಉಪವೀತ ಧರಿಪ ಮಾರುತ |
ಕಾಮಾದಿ ವರ್ಗರಹಿತ ||
ವ್ಯೊಮಾದಿ ಸರ್ವ ವ್ಯಾಪುತ ಸತತ ನಿರ್ಭೀತ |
ರಾಮಚಂದ್ರನ ನಿಜದೂತ ||
ಯಾಮ ಯಾಮಕೆ ನಿನ್ನಾರಾಧಿಪುದಕೆ |
ಕಾಮಿಪೆ ಎನಗಿದು ನೇಮಿಸಿ ಪ್ರತಿದಿನ |
ಈಮನಸಿಗೆ ಸುಖಸ್ತೋಮವ ತೋರುತ |
ಪಾಮರಮತಿಯನು ನೀ ಮಾಣಿಪುದು ||೧||
ವಜ್ರ ಶರೀರ ಗಂಭೀರ ಮುಕುಟಧರ |
ದುರ್ಜನ ವನಕುಠಾರ |
ನಿರ್ಜರ ಮಣಿ ದಯಾಪಾರ ವಾರ ಉದಾರ |
ಸಜ್ಜನ ರಘಪರಿಹಾರ ||
ಅರ್ಜುನಗೊಲಿದಂದು ಧ್ವಜವಾನಿಸಿನಿಂದು |
ಮೂರ್ಜಗವರಿವಂತೆ ಗರ್ಜನೆ ಮಾಡಿದೆ |
ಹೆಜ್ಜೆ ಹೆಜ್ಜೆಗೆ ನಿನ್ನ ಅಬ್ಜಪಾದದ ಧೂಳಿ |
ಮಾರ್ಜನದಲಿ ಭವ ವರ್ಜಿತನೆನಿಸೊ ||೨||
ಪ್ರಾಣ ಅಪಾನ ವ್ಯಾನೋದಾನ ಸಮಾನ |
ಆನಂದ ಭಾರತಿ ರಮಣ |
ನೀನೆ ಶರ್ವಾದಿ ಗೀರ್ವಾಣ ದ್ಯಮರರಿಗೆ |
ಜ್ಞಾನ ಧನ ಪಾಲಿಪ ವರೆಣ್ಯಾ |
ನಾನು ನಿರುತದಲಿ ಏನೇನೆಸಗಿದೆ |
ಮಾನಸಾದಿ ಕರ್ಮ ನಿನಗೊಪ್ಪಿಸಿದೆನೊ |
ಪ್ರಾಣನಾಥ ಸಿರಿವಿಜಯ ವಿಠ್ಠಲನ |
ಕಾಣಿಸಿ ಕೊಡುವುದು ಭಾನು ಪ್ರಕಾಶಾ ||೩||
pavamAna pavamAna
pavamAna jagadaprANa saMkaruShaNa
BavaBayAraNya dahanA, pavana ||pa||
SravaNave modalAda navavidha Bakutiya |
tavakadiMdali koDu kavijana priya ||a.pa||
hEmakaccuTa upavIta dharipa mAruta |
kAmAdi vargarahita ||
vyomAdi sarva vyAputa satata nirBIta |
rAmacaMdrana nijadUta ||
yAma yAmake ninnArAdhipudake |
kAmipe enagidu nEmisi pratidina |
Imanasige suKastOmava tOruta |
pAmaramatiyanu nI mANipudu ||1||
vajra SarIra gaMBIra mukuTadhara |
durjana vanakuThAra |
nirjara maNi dayApAra vAra udAra |
sajjana raGaparihAra ||
arjunagolidaMdu dhvajavAnisiniMdu |
mUrjagavarivaMte garjane mADide |
hejje hejjege ninna abjapAdada dhULi |
mArjanadali Bava varjitaneniso ||2||
prANa apAna vyAnOdAna samAna |
AnaMda BArati ramaNa |
nIne SarvAdi gIrvANa dyamararige |
j~jAna dhana pAlipa vareNyA |
nAnu nirutadali EnEnesagide |
mAnasAdi karma ninagoppisideno |
prANanAtha sirivijaya viThThalana |
kANisi koDuvudu BAnu prakASA ||3||
Leave a Reply