Composer : Shri kakhandaki Krishna dasaru
ಶರಣು ಶರಣು ಶ್ರೀ ದತ್ತಾತ್ರೇಯಾ ಶರಣು ಸಕಲಾ ಭುವನಾಶ್ರಯಾ
ಶರಣೆಂಬೆ ಸಿಂಹಾಚಲ ನಿಲಯಾ ಸುರಜನ ರೇಯಾ ಸಲಹಯ್ಯಾ [ಅ.ಪ]
ವನರುಹ ಸಂಭವ ತ್ರಿಲೋಚನ ಸನಕಾದಿ ಮುನಿ ವಂದಿತ ಚರಣ
ಜನವನ ವಿಜನ ವ್ಯಾಪಕ ಘನ ಅನಸೂಯಾ ನಂದನ ಯೋಗೀಶಾ [೧]
ತತ್ವಯೋಗ ಸಿದ್ಧಿ ಬುದ್ಧಿ ದಾತಾರಾ ಸತ್ವ ಗುಣಾಲಂ ಕೃತ ಜ್ಞಾನ ಸಾಗರಾ
ಸತ್ಯ ಸನಾತನೇ ಮುನಿ ದಿಗಂಬರಾ ಭಕ್ತ ಸಹಕಾರಾ ಅವಧೂತಾ [೨]
ಕಂದರ್ಪ ಕೋಟಿ ಸುಂದರಾಕಾರಾ ಹೊಂದಿದಾ ಭರಣಾನೇಕ ಶೃಂಗಾರಾ
ಇಂದು ಸೂರ್ಯಾನಳ ತೇಜ ವ್ಯಾಪಾರಾ ಎಂದೆಂದೆಚ್ಚರಾ ಕಂಡು ನಿನ್ನಾ [೩]
ಮಂದಮತಿ ಬಾಲನ ಬಿನ್ನಾಹದ ಸ್ತುತಿ ಬಂದು ಅರ್ಪಿಸಿಕೋ ದುದಿ ಶ್ರೀಪತಿ
ಇಂದು ಮೊರೆ ಹೊಕ್ಕೆನು ಅನನ್ಯಾಗತಿ ತಂದೇ ಮಹಿಪತಿ ಸುತ ಸ್ವಾಮೀ [೪]
SaraNu SaraNu SrI dattAtrEyA SaraNu sakalA BuvanASrayA
SaraNeMbe siMhAcala nilayA surajana rEyA salahayyA [a.pa]
vanaruha saMBava trilOcana sanakAdi muni vaMdita caraNa
janavana vijana vyApaka Gana anasUyA naMdana yOgISA [1]
tatvayOga siddhi buddhi dAtArA satva guNAlaM kRuta j~jAna sAgarA
satya sanAtanE muni digaMbarA Bakta sahakArA avadhUtA [2]
kaMdarpa kOTi suMdarAkArA hoMdidA BaraNAnEka SRuMgArA
iMdu sUryAnaLa tEja vyApArA eMdeMdeccarA kaMDu ninnA [3]
maMdamati bAlana binnAhada stuti baMdu arpisikO dudi SrIpati
iMdu more hokkenu ananyAgati taMdE mahipati suta svAmI [4]
Leave a Reply