Composer : Shri kakhandaki Krishna dasaru
ದತ್ತಾತ್ರೇಯ ನಮೋ ದತ್ತಾತ್ರೇಯಾ
ಅತ್ರಿ ವರದಾಯಕನೇ ದತ್ತಾತ್ರೇಯಾ ||ಪ||
ಭಕುತಿ ಮಾಡಲು ಮೆಚ್ಚಿ ಅನಸೂಯಾ ಕರದೊಳಗ
ಸುಕುಮಾರ ವೇಷದವತಾರ ತಾಳಿ
ಸಕಲ ಸಜ್ಜನರಿಗೇ ಮುಕುತಿ ಪಥ ದೋರಲಿಕೆ
ಅಕಳಂಕ ಯೋಗ ರೂಪವ ಭರಿಸಿದೆ [೧]
ಉದಯದೊಳು ವಾರ್ಣಾಸಿ ಸುರನದಿಯಲಿ ಸ್ನಾನ
ವದಗಿ ಕೊಲ್ಹಾಪುರಕೆ ಮಧ್ಯಾಹ್ನದೀ
ವಿದಿತ ಭಿಕ್ಷವನುಂಡು ಪೋಗಿ ಸಂಜೆಗೆ ಮಾಹು
ರದಿ ಶಯನ ನಿತ್ಯ ವಿಧಿಯಲಿ ಚರಿಸುವೇ [೨]
ದತ್ತಹರಿ ಸಾಕ್ಷಾತ ಉನ್ಮದೋನಂದದಾಯಕ
ದತ್ತವರ ಮುನಿ ದಿಗಂಬರ ಬಾಲಕಾ
ನಿತ್ಯ ಪ್ರಕಾಶಮಯ ಜ್ಞಾನಸಾಗರನೆಂಬರ
ಹತ್ತು ಪೆಸರಂಗೊಳಲು ದುರಿತ ಭಯವಾರಿಸುವೆ [೩]
ಆವನಾಗಲಿ ಮರೆದು ನಿಮ್ಮ ನಾಮವ ನೆನೆವ
ಠಾವಿನಲಿ ಸುಳಿವ ಪ್ರತ್ಯಕ್ಷದಿಂದಾ
ಭಾವದಿಂದಲಿ ಸ್ಮರಿಸಿದವಗ ಇಹಪರ ಸುಖವ
ನೀವ ಕರುಣಾಳು ದೀನೋದ್ಧಾರಕಾ [೪]
ಇಪ್ಪತ್ತು ನಾಲ್ಕು ಗುರುಗಳ ಕ್ರಮವ ದೋರಿಭವ
ಮುಪ್ಪು ಬಿಡಿಸಿದೆ ಯದುರಾಯಗಂದು
ಒಪ್ಪಿನಿಂದಲಿ ಗುರು ಮಹಿಪತಿ ಪ್ರಭುಯೆನಿಸಿ
ತಪ್ಪ ನೋಡದೆ ನಂದ ನುದ್ಧರಿಸಿದೆಲೆ ದೇವಾ [೫]
dattAtrEya namO dattAtrEyA
atri varadAyakanE dattAtrEyA ||pa||
Bakuti mADalu mecci anasUyA karadoLaga
sukumAra vEShadavatAra tALi
sakala sajjanarigE mukuti patha dOralike
akaLaMka yOga rUpava Bariside [1]
udayadoLu vArNAsi suranadiyali snAna
vadagi kolhApurake madhyAhnadI
vidita BikShavanuMDu pOgi saMjege mAhu
radi Sayana nitya vidhiyali carisuvE [2]
dattahari sAkShAta unmadOnaMdadAyaka
dattavara muni digaMbara bAlakA
nitya prakASamaya j~jAnasAgaraneMbara
hattu pesaraMgoLalu durita BayavArisuve [3]
AvanAgali maredu nimma nAmava neneva
ThAvinali suLiva pratyakShadiMdA
BAvadiMdali smarisidavaga ihapara suKava
nIva karuNALu dInOddhArakA [4]
ippattu nAlku gurugaLa kramava dOriBava
muppu biDiside yadurAyagaMdu
oppiniMdali guru mahipati praBuyenisi
tappa nODade naMda nuddharisidele dEvA [5]
Leave a Reply