Composer : Shri Prasannavenkata dasaru on Shri Satyanatharu
Shri Satyanatha Tirtharu : 1660-1673
satyanaathaguru: paatu yO dhIrO navachaMdrikaam |
navaamRutagadaatIrthataaMDavaani vyachIklRupat |
ಸತ್ಯನಾಥಗುರು: ಪಾತು ಯೋ ಧೀರೋ ನವಚಂದ್ರಿಕಾಮ್ |
ನವಾಮೃತಗದಾತೀರ್ಥತಾಂಡವಾನಿ ವ್ಯಚೀಕ್ಲೃಪತ್ |
Vrundavana – Veeracholapuram, TN
Ashrama Gurugalu – Sri Satyanidhi Tirtharu, Kurnool
Ashrama Shishyaru – Sri Satyabhinavatirtharu, Nachiarkoil
Aradhana – Margashira Shudda Ekadashi (Geeta jayanti)
ಬನ್ನಿಗಡ ಸುಜನರೆಲ್ಲ ಪಾವನಕಾಯ ಸುಜನಪ್ರಿಯ |
ಪುಣ್ಯ ಸತ್ಯನಾಥ ಯತಿರನ್ನನ ಪಟ್ಟಣಕಿಂದು ||ಪ.||
ಪರಬೊಮ್ಮನೆಂಬುವ ಮನೆದೈವನಾಗಿಹ
ಪರಸುಖವನೀವ ಮರುತದೇವನೆಂಬಾತ
ಪರಮಪದದ ಗುರುವು ಯುಕ್ತಿಯಿಂದ ಕಾ
ಪುರುಷರ ಗಲಿಸುವಂತೆ ಸತ್ಯನಾಥ
ಪುರಸತಿಗೆ ಬೋಧಿಸುವ ಪರಮವಾರ್ತೆಯ ಕೇಳ [೧]
ನವಭಕುತಿ ರತುನದಿಂದ ನಿರ್ಮಿತ ಪ್ರಾಕಾರಕೆ
ನವದ್ವೇಷಿಗಳು ದಾಳಿಯಿತ್ತು ಅಂಡಲೆಯಲು ದಾ
ನವಾರಿಯ ನಾಮಾಯುಧವ ಸತ್ಯಾಭಿ
ನವ ತೀರ್ಥರೆಂಬೊ ಪುತ್ರಗೆ ನೀಡುತ ಮಾ
ನವ ಹರಿಯೆಂಬಸುರರ ಮಡುಹಿಸುವುದ ನೋಡ [೨]
ಕಾಯಜ ಚೋರನೆಂಬವ ತಾ ಕಳ್ಳ ಹನ್ನೊಂದರ ಕೂಡಿ
ಕಾಯವೆಂಬ ರಾಜಗೃಹಕೆ ಕನ್ನವಿಕ್ಕುವುದ ಕಂಡು
ಕಾಯುವ ಜ್ಞಾನವೆಂಬ ಭಟನು ಅಟ್ಟಲವನ
ಕೈದು ಚಾಪವ ಸೆಳೆದು ಮಿಕ್ಕು ಚೋರನೀ
ಕಾಯ ಕಟ್ಟಿಸುವಂಥ ಕರುಣಿಗೆ ನಮಿಸುವೆ [೩]
ಹರಿದಾಸರೆನಿಸುವ ಹಲವು ದೊರೆಗಳುಂಟು
ಹರದಾರಿಕ್ಕೆಲದ ಪುಣ್ಯವ ಮಾಡಿ ಸುಧೆವೀರಿ
ಹರಿತತ್ವ ನಾಣ್ಯದೊಳು ರಾಮನಾಮದ
ಹಿರಿದು ಮುದ್ರೆಯನೊರೆದು ಪರಂಪರ
ಹರುಷ ವ್ಯವಸಾಯವುಂಟು ಹಿರಿಯಾಮೃತವುಣ್ಣ [೪]
ಅಭಿಜ್ಞಗುರು ಸತ್ಯನಿಧಿಯ ಸುತ ಸತ್ಯನಾಥ
ಅಭು ಪ್ರಸನ್ವೆಂಕಟೇಶ್ವರನ ಭಜಕ
ಅಬುಜ ಪರಿಮಳ ಮಂದಾನಿಲವಿಡಿವಳಿಯಂತೆ
ಅಭಿನವ ಚಂದ್ರಿಕೆದೋರಿ ಅಭಿಜ್ಞಾನತೆ ಮೆರೆದ
ಅಭೀತ ಮಂಗಳಗಾತ್ರ ಅಮಿತ ಬುಧರ ಮಿತ್ರ [೫]
bannigaDa sujanarella pAvanakAya sujanapriya |
puNya satyanAtha yatirannana paTTaNakiMdu ||pa.||
parabommaneMbuva manedaivanAgiha
parasuKavanIva marutadEvaneMbAta
paramapadada guruvu yuktiyiMda kA
puruShara galisuvaMte satyanAtha
purasatige bOdhisuva paramavArteya kELa [1]
navaBakuti ratunadiMda nirmita prAkArake
navadvEShigaLu dALiyittu aMDaleyalu dA
navAriya nAmAyudhava satyABi
nava tIrthareMbo putrage nIDuta mA
nava hariyeMbasurara maDuhisuvuda nODa [2]
kAyaja cOraneMbava tA kaLLa hannoMdara kUDi
kAyaveMba rAjagRuhake kannavikkuvuda kaMDu
kAyuva j~jAnaveMba BaTanu aTTalavana
kaidu cApava seLedu mikku cOranI
kAya kaTTisuvaMtha karuNige namisuve [3]
haridAsarenisuva halavu doregaLuMTu
haradArikkelada puNyava mADi sudhevIri
haritatva nANyadoLu rAmanAmada
hiridu mudreyanoredu paraMpara
haruSha vyavasAyavuMTu hiriyAmRutavuNNa [4]
aBij~jaguru satyanidhiya suta satyanAtha
aBu prasanveMkaTESvarana Bajaka
abuja parimaLa maMdAnilaviDivaLiyaMte
aBinava caMdrikedOri aBij~jAnate mereda
aBIta maMgaLagAtra amita budhara mitra [5]
Leave a Reply