Composer : Shri Helavanakatte Giriyamma
ಈತ ಅಂಜನೆಸುತನು ಭೀಮರಾಯನು [ಪ.]
ಈತ ರಾಮರ ಬಂಟನು
ಈತ ಕೋಟಿಲಿಂಗವನ್ನು ರೋಮರೋಮದಿ ಧರಿಸಿದವನು
ಈತ ಲೋಕ ಪ್ರಖ್ಯಾತನು ಭೀಮರಾಯನು [ಅ.ಪ.]
ಪುಟ್ಟಿದಾಗಲೆ ಗಗನ ಮಂಡಲವನ್ನು ಮುಟ್ಟಿ
ರವಿಯನು ತುಡುಕಿ
ಇಟ್ಟ ಕೈಪ ಕುಂಡಲವನ್ನು ತೊಟ್ಟು
ಮೆರೆವಂಥ ದಿಟ್ಟ ಹನುಮರಾಯನು [೧]
ಮುಂಚೆ ಸ್ವಾಮಿಯ ಕಂಡು ಅಂದು ಸೇವೆಯ
ವಂಚನಿಲ್ಲದೆ ಮಾಡಿದ
ಅಂಚೆಗಮನೆ ಸೀತಾದೇವಿಗುಂಗುರವಿತ್ತು ಮಿಂಚುಳ್ಳ
ವನವ ಕಿತ್ತನು ಭೀಮರಾಯನು [೨]
ಲಂಕಿಣಿಯನೆ ತುಡುಕಿ ಮಾಯಾಜಾಲವ
ಶಂಕೆಯಿಲ್ಲದೆ ಗೆಲಿದ
ಲಂಕಾಪಟ್ಟಣವ ಸುಟ್ಟು ರಾವಣೇಶ್ವರನ
ಅಹಂಕಾರವಳಿದ ಧೀರ , ಭೀಮರಾಯನು [೩]
ತಂತ್ರದರಸ ಶೂರನು ಸಂಗ್ರಾಮದಿ ಮಾರಾಂತ
ವೀರರ ಗೆಲಿದ
ಪಂಥದಿ ಸಂಜೀವನವ ತಂದು ಲಕ್ಷ್ಮಣನ
ಅಂತರವಳಿದ ಶೂರನು ಭೀಮರಾಯನು [೪]
ಲೆಕ್ಕವಿಲ್ಲದೆ ಖಳರ ಗೆಲಿದು ಬಂದು
ಕೊಕ್ಕನೂರೊಳು ನಿಂತನು
ರಕ್ಕಸಾಂತಕ ಹೆಳವನಕಟ್ಟೆ ರಂಗಯ್ಯನ
ಅಕ್ಕರುಳ್ಳತಿದಾಸನು ಭೀಮರಾಯನು [೫]
Ita aMjanesutanu bhImarAyanu [pa.]
Ita rAmara baMTanu
Ita kOTiliMgavannu rOmarOmadi dharisidavanu
Ita lOka praKyAtanu bhImarAyanu [a.pa.]
puTTidAgale gagana maMDalavannu muTTi
raviyanu tuDuki
iTTa kaipa kuMDalavannu toTTu
merevaMtha diTTa hanumarAyanu [1]
muMce svAmiya kaMDu aMdu sEveya
vaMcanillade mADida
aMcegamane sItAdEviguMguravittu miMcuLLa
vanava kittanu bhImarAyanu [2]
laMkiNiyane tuDuki mAyAjAlava
SaMkeyillade gelida
laMkApaTTaNava suTTu rAvaNESvarana
ahaMkAravaLida dhIra , bhImarAyanu [3]
taMtradarasa SUranu saMgrAmadi mArAMta
vIrara gelida
paMthadi saMjIvanava taMdu lakShmaNana
aMtaravaLida SUranu bhImarAyanu [4]
lekkavillade KaLara gelidu baMdu
kokkanUroLu niMtanu
rakkasAMtaka heLavanakaTTe raMgayyana
akkaruLLatidAsanu bhImarAyanu [5]
Leave a Reply