Ninna karunavanu

Composer: Shri Vadirajaru

ನಿನ್ನ ಕರುಣವನ್ನು ವರ್ಣಿಪ ಕವಿ ಯಾರು ಅನ್ನದಾನಿ ಕುಕ್ಕೆಯ ಶನ್ಮುಖನೆ ||

ಮನಕೆ ಅಭಿಮಾನಿಯಾಗಿ ನರರ ಯಂತ್ರದೊಳಿದ್ದು ಅನುದಿನ ಅಜನ ಸುಖವ ಕೊಡುವೆ |
ಸನಕಾದಿ ಮುನಿ ಕುಲಾಗ್ರಜನಾಗಿ ಲೋಕಕ್ಕೆ ಅನುಪಮ ತತ್ವದ ನಿರವ ತೋರಿಸುವೆ ||೧||

ತಾರಕ ಮೊದಲಾದ ದನುಜರ ಮರ್ದಿಸಿ, ಧಾರುಣಿ ದಿವಿಜರಟ್ಟುಳಿ ಅಟ್ಟುವೆ
ವೀರ ಸಾಂಬ ಮೊದಲಾದ ರೂಪವ ತಾಳ್ದು ಧಾರುಣಾಸುರರ ಕಪಟ ಖಂಡಿಸುವೆ ||೨||

ನರರ ಕುಷ್ಠ ಮೊದಲಾದ ಘೋರ ವ್ಯಾಧಿಗಳನ್ನು ಪರಿಹರಿಸುತಲಿ ಪಾವನರ ಮಾಳ್ಪೆ |
ಸಿರಿ ಹಯವದನ ನರಸಿಂಹನ ಮೆಚ್ಚಿನ ವರ ಕುಕ್ಕೆ ಪುರದಲ್ಲಿ ಪುನರಪಿ ತೋರಿದೆ ||೩||


ninna karuNavannu varNipa kavi yaaru annadAni kukkeya shanmukhane ||

manake abhimAniyaagi narara yaMtradoLiddu anudina ajana sukhava koDuve |
sanakAdi muni kulAgrajanAgi lOkakke anupama tatvada nirava tOrisuve ||1||

tAraka modalAda danujara mardisi, dhAruNi divijaraTTuLi aTTuve
veera sAMba modalAda rUpava tALdu dhAruNAsurara kapaTa khaMDisuve ||2||

narara kuShTha modalAda ghOra vyAdhigaLannu pariharisutali pAvanara mALpe |
siri hayavadana narasiMhana mecchina vara kukke puradalli punarapi tOride ||3||

Leave a Reply

Your email address will not be published. Required fields are marked *

You might also like

error: Content is protected !!