Composer: Shri Tande Venkatesha vittala
ಕುಕ್ಕೆ ಸುಬ್ರಹ್ಮಣ್ಯ ನಿನ್ನ ಮೊರೆ ಹೊಕ್ಕೆ ದ್ವಿಜ ಶರಣ್ಯ ||
ದು:ಖ ಭವ ಸಮುದ್ರಕ್ಕೆ ಪ್ಲವನೆ, ನಿರ್ಲಕ್ಷಿದೆನ್ನನು ತಕ್ಷಣ ಕಾಯೊ ||ಅ.ಪ.||
ವಾಸುಕಿ ಕಶ್ಯಪನ ದೇಶದಿ ಧ್ಯಾನದೊಳಿರೆ ಶಿವನ |
ಭಾಶೆ ಒಲಗಿ ಭಯ ನಾಶಕವೆನಿಸಲು ಕೇಸರಿಕುದರ ನಿವಾಸನೆಂದೆನಿಸಿದೆ ||೧||
ತಾರಕ ಕ್ರತು ಭುಜರ ಹಿಮ್ಸಿಸೆ ಮಾರಹರನ ಕುವರ |
ಘೋರ ದಿತಿಜ ಸಂಹಾರ ದಿವಿಜರನ ಧೀರ ಶಣ್ಮುಖ ನಿವಾರಿಸಿದೆಯೊ ಭಯ ||೨||
ಸುಬ್ರಹ್ಮಣ್ಯ ಸ್ವಾಮಿ ಉನ್ಮಾದ ಭ್ರಮ ಹರ ಪ್ರೇಮಿ |
ವಿಭ್ರಾಮಿತರನು ಶುಭ್ರ ಗೈಸಿ ಜೀವಬ್ರಹ್ಮೈಕ್ಯದ ದುರ್ಭ್ರಾಂತಿಯ ಕಳೆ ||೩||
ಮಾರ್ಗಶಿರದ ಶುದ್ಧ ಶಶ್ಟಿ ಸುರರ್ಗಳಿಗನವದ್ಯ |
ನಿರ್ಗತ ಮದದಿ ಭೂಸ್ವರ್ಗಜರುಚ್ಚೇಷ್ಟ ವರ್ಗದೊಳುರುಳಳು ದುರ್ಗತಿ
ಕಳೆವರು ||೪||
ಕಾಮರೂಪ ದೇವ ದೈತ್ಯ ವಿರಾಮಮಯಶೋ ವಿಭವ |
ಧೀಮತ ಮಧ್ವ ಸಪ್ರೇಮ ಸಹಜ ವಿಷ್ಣು ನಾಮ ತೀರ್ಥ ಚದ್ಧಾಮ ಮನೋಹರ ||೫||
ತ್ರಿಪಥಗಾಮಿ ಕುವರ ಧರೆಯೊಳು ಉಪಚರಿಸುತಲಿಹರ |
ಸ್ವಪ್ನ ಕಾಲದಲು ಅಪಮರುತ್ಯಾದಿಗಳು ಉಪಟಳ್ಳಿಲ್ಲ ಬಹು ತಪಸಿನ ಫಲವಿದು ||೬||
ಸ್ಕಂದ ಪರಮ ಗುರುವೇ ನತಜನ ವೃಂದ ಕಲ್ಪ ತರುವೇ |
ತಂದೆ ವೇಂಕಟೇಶ ವಿಠ್ಠಲಾತ್ಮಜ ಮನಂದಾಗಮದನು ಸಂಧಾನನೊಳಿಡು ||೭||
kukke subrahmaNya ninna more hokke dvija sharaNya ||
du:kha bhava samudrakke plavane, nirlakShidennanu takShaNa kaayo ||a.pa.||
vAsuki kashyapana dEshadi dhyAnadoLire shivana |
bhAshe olagi bhaya nAshakavenisalu kEsarikudara nivAsaneMdeniside ||1||
tAraka kratu bhujara himsise mAraharana kuvara |
ghOra ditija saMhAra divijarana dheera shaNmukha nivArisideyo bhaya ||2||
subrahmaNya svAmi unmAda bhrama hara prEmi |
vibhrAmitaranu shubhra gaisi jIvabrahmaikyada durbhrAMtiya kaLe ||3||
mArgashirada shuddha shashTi surargaLiganavadya |
nirgata madadi bhUsvargajarucchEShTa vargadoLuruLaLu durgati
kaLevaru ||4||
kAmarUpa dEva daitya virAmamayashO vibhava |
dhImata madhva saprEma sahaja viShNu nAma tIrtha chaddhAma manOhara ||5||
tripathagAmi kuvara dhareyoLu upacharisutalihara |
svapna kAladalu apamarutyAdigaLu upaTaLLilla bahu tapasina phalavidu ||6||
skaMda parama guruvE natajana vRuMda kalpa taruvE |
taMde vEMkaTEsha viThThalAtmaja manaMdAgamadanu saMdhAnanoLiDu ||7||
Leave a Reply