Composer : Shri Muddumohana vittala dasaru on Lakshmi Devi
ಪರಿಪಾಲಿಸುವುದು ಎಮ್ಮನು ಪರಮಾತ್ಮನ ರಾಣಿ
ಕರುಣಾಕರನ ಪಾದ ಸ್ಮರಣೆಯನೆ ಕೊಟ್ಟು (ಪ)
ಅಮರೇಶ ವಂದ್ಯಳೆ ಕಮಲಾಲಯೆ ನೀಬಂದು
ಶ್ರಮವಿಲ್ಲದೆ ಯನ್ನೆಯ ಮಮತೆಯನು ಬಿಡಿಸು [೧]
ವಸುದೇವ ಸುತನ ರಾಣಿ ಅಸುರ ಸಂಹಾರಳೇ ನಿನ್ನ
ವಶವಾದ ಮೇಲೆ ಅಂಭ್ರಣಿಯೆ ನಸುನಗುತ ಈಗ [೨]
ಮಂದರೋದ್ಧಾರ ಎನ್ನ ಸಂದು ಸಂದಲಿ ಕಾರ್ಯವ
ನಿಂದು ಮಾಡಿಸುವಂಥದನ್ನು ಚಂದದೀ ಬೋಧವ ಕೊಟ್ಟು [೩]
ಮಂಗಳಾಂಗಿಯೆ ನಿನ್ನ ಮುಂಗಾಣದೆ ಸೊರಗಿದೆ
ಅಂಗಜಪಿತನ ಜಾಯೇ ಭಂಗ ಪಡಿಸದೆ ಬೇಗಾ [೪]
ಪದ್ಮ ಸಂಭವನ ಮಾತೆ ಮುದ್ದುಮೋಹನವಿಠಲ ಪದ
ಪದ್ಮಗಳ ನೀನೊಲಿದು ಹೃತ್ಪದ್ಮದಲಿ ಕಾಣಿಸುತ [೫]
paripAlisuvudu emmanu paramAtmana rANi
karuNAkarana pAda smaraNeyane koTTu (pa)
amarESa vaMdyaLe kamalAlaye nIbaMdu
Sramavillade yanneya mamateyanu biDisu (1)
vasudEva sutana rANi asura saMhAraLE ninna
vaSavAda mEle aMBraNiye nasunaguta Iga (2)
maMdarOddhAra enna saMdu saMdali kAryava
niMdu mADisuvaMthadannu caMdadI bOdhava koTTu (3)
maMgaLAMgiye ninna muMgANade soragide
aMgajapitana jAyE BaMga paDisade bEgA (4)
padma saMBavana mAte muddumOhanaviThala pada
padmagaLa nInolidu hRutpadmadali kANisuta (5)
Leave a Reply