Shri Padmanabha Tirthara

Composer : Shri Lakumeesha dasaru on Shri Padmanabha Tirtharu

By Smt.Shubhalakshmi Rao

ಶ್ರೀ ಪದ್ಮನಾಭ ತೀರ್ಥರ ಶ್ರೀ ಪದ್ಮ ಅಡಿ ಭಜಿಸೆ
ಶ್ರೀ ಪದ್ಮನಾಭ ನೊಲಿವಾ | ಪ |

ಶ್ರೀಪತಿ ಪರ ನೆಂದು ತಿಳಿಸುತ
ಆಪದಂಗಳ ಕಳೆದು ರಕ್ಷಿಪ | ಅಪ್ |

ಆನಂದ ತೀರ್ಥರ ಸಾನುರಾಗದಿ ಸೇವಿಸಿ
ಹೀನ ಮತಗಳ ಗೆಲ್ಲುತ
ಪೂರ್ಣಬೋಧರ ಸರ್ವ ಮೂಲ ಗ್ರಂಥ
ಜಾಣರಿವ ರುಪದೇಶ ಗೊಂಡು
ಕ್ಷೋಣಿಯೊಳಗೆ ಶೇಷಾಂಶ ರಾಶ್ರಮ
ಮಾಣದೆ ಗೊಂಡ ಪ್ರಥಮ ಮುನಿಯೇ | ೧ |

ನಿತ್ಯ ಸಾವಿರ ಮುಖದಿ
ಒತ್ತಿ ಶಿಷ್ಯರಿಗೆ ಪದರದಿ
ಅರ್ಥ ಭಾಷ್ಯಕೆ ಪೇಳುತ
ಸತ್ತರ್ಕ ದೀಪಾವಲೀ ಸನ್ಯಾಯ
ರತ್ನಾವಳಿಯ ರಚಿಸುತ
ಮಿಥ್ಯಾ ವಾದಿಗಳನು ಜಯಿಸಿ
ಮುಕ್ತಿಪ್ರದ ಸರ್ವೇಶ ಹರಿಯೆಂದ | ೨ |

ಅಂಗಾಂಗ ತತ್ವಲಯ ಮಂಗಳ ಚಿಂತನದಿ
ತುಂಗೆಯ ನಡು ಗಡ್ಡೆ ಲಿ
ಗಂಗಾ ಜನಕ ವಿಹಂಗ ವಾಹನ
ರಂಗ ಶ್ರೀ ಲಕುಮೀಶ ದೇವನ
ಹಿಂಗದೆ ನೆನೆಯುತ್ತ ಆದಿಯ
ಸಿಂಗರ ಬೃಂದಾವನ ಸೇರ್ದ | ೩ |


SrI padmanABa tIrthara SrI padma aDi Bajise
SrI padmanABa nolivA | pa |

SrIpati para neMdu tiLisuta
ApadaMgaLa kaLedu rakShipa | ap |

AnaMda tIrthara sAnurAgadi sEvisi
hIna matagaLa gelluta
pUrNabOdhara sarva mUla graMtha
jANariva rupadESa goMDu
kShONiyoLage SEShAMSa rASrama
mANade goMDa prathama muniyE | 1 |

nitya sAvira muKadi
otti SiShyarige padaradi
artha BAShyake pELuta
sattarka dIpAvalI sanyAya
ratnAvaLiya racisuta
mithyA vAdigaLanu jayisi
muktiprada sarvESa hariyeMda | 2 |

aMgAMga tatvalaya maMgaLa ciMtanadi
tuMgeya naDu gaDDe li
gaMgA janaka vihaMga vAhana
raMga SrI lakumISa dEvana
hiMgade neneyutta Adiya
siMgara bRuMdAvana sErda | 3 |

2 responses to “Shri Padmanabha Tirthara”

  1. Radha Narayanan Avatar

    Very very nice.
    I liked it useful to other thank

    1. admin Avatar

      Thank you aunty !

Leave a Reply

Your email address will not be published. Required fields are marked *

You might also like

error: Content is protected !!