Composer : Shri Karpara Narahari Dasaru on Shri Padmanabha Tirtharu
ಪದ್ಮನಾಭರ ಭಜಿಸೋ ಹೇ ಮನುಜಾನೀ ||ಪ||
ಮಧ್ವರಾಯರ ಕರಪದ್ಮ ಸಂಭವರಾದ ||ಅ.ಪ||
ಮತ್ತ ಮಾಯಿಗಳೆಂಬೊ ಹಸ್ತಿಗಣಕೆ ಪಂಚ
ವಕ್ತ್ರರೆಂದೆನಿಸಿದ ಪೃಥ್ವೀಸುರಸೇವಿತ [೧]
ಪ್ರೀತಿಯಿಂದಲಿ ಗೋಪಿನಾಥನರ್ಚಿಸಿ ಸುಖ
ತೀರ್ಥ ಗ್ರಂಥಕೆ ಸುವ್ಯಾಖ್ಯಾತ್ರರೆಂದೆನಿಸಿದ [೨]
ಧರೆಯೊಳು ಶರಣರ ಪೊರೆವ ಕಾರ್ಪರನರ
ಹರಿಯನೊಲಿಸಿದಂಥ ಪರಮ ಮಹಿಮರಾದ [೩]
padmanABara BajisO hE manujAnI ||pa||
madhvarAyara karapadma saMBavarAda ||a.pa||
matta mAyigaLeMbo hastigaNake paMca
vaktrareMdenisida pRuthvIsurasEvita [1]
prItiyiMdali gOpinAthanarcisi suKa
tIrtha graMthake suvyAKyAtrareMdenisida [2]
dhareyoLu SaraNara poreva kArparanara
hariyanolisidaMtha parama mahimarAda [3]
Leave a Reply