Composer: Shri Bannanje Govindacharya about Shri Madhwacharya
ಪೂಜ್ಯ ಗುರುಗಳಾದ ಬನ್ನಂಜೆ ಗೋವಿಂದಾಚಾರ್ಯರು
ಆಚಾರ್ಯ ಮಧ್ವರ ಕುರಿತು ರಚಿಸಿದ ಪದ್ಯ |
ಕೇಳಿರಿ ಕೇಳಿರಿ ಚೆಂದದ ಕಥೆಯ
ಉಡುಪಿಯ ಕೃಷ್ಣನ ತಂದನ ಕಥೆಯ |ಪ|
ಕೊಡಬೇಡಿ ಕೊಡಬೇಡಿ ಒಂದು ಚಿಕ್ಕಾಸು
ಹಾಳು ಮಾಡದಿರಿ ಬಾಳಿನೊಂದೊಂದು ತಾಸು |ಅ .ಪ|
ದೇವರ ಆಣತಿ ತಲೆಯಲಿ ಹೊತ್ತು
ಅಂಜನೆಯುದರದಿ ಹುಟ್ಟಿತು ಕೂಸು
ಬಾಲದ ಬೆಂಕಿಯ ರಿಂಗಣದಿಂದ
ಲಂಕಾಪಟ್ಟಣ ಸುಟ್ಟಿತು ಕೂಸು || ೧ ||
ರಕ್ಕಸರೆಲ್ಲ ಬೆಕ್ಕಸ ಬೆರಗು
ರಾವಣನೆದೆಗೇ ಗುದ್ದಿತು ಕೂಸು
ಕಪಿಗಳ ಕಿಲ ಕಿಲ ಕೇಳಿಸದಾಗ
ಗಂಧಮಾದನವ ನೆತ್ತಿತು ಕೂಸು || ೨ ||
ಹಾರುವನಾ ಮನೆ ಮಕ್ಕಳನುಳಿಸಲು
ಬಂಡಿ ಅನ್ನವನು ಉಂಡಿತು ಕೂಸು
ಅರಗಿನ ಮನೆಯನು ಬೆಂಕಿಯಲಿರಿಸಿ
ಪಾಂಚಾಲಿಯ ಕೈ ಹಿಡಿಯಿತು ಕೂಸು ||೩||
ತನ್ನರಗಿಣಿಗೇ ಹೂವನು ತರಲು
ಮಣಿಮಂತನ ತಲೆ ಮಣಿಸಿತು ಕೂಸು
ಏಳು ಹನ್ನೊಂದೆದುರೆದುರಾಗಲು
ಕುರುಡನ ಮಕ್ಕಳ ಮುಗಿಸಿತು ಕೂಸು ||೪||
ದೇವರ ಆಣತಿ ತಲೆಯಲಿ ಹೊತ್ತು
ಪಾಜಕದಲಿ ಮರುಹುಟ್ಟಿತು ಕೂಸು
ಬೆಂದ ಹುರುಳಿಯನು ಅಕ್ಕ ತಿನ್ನಿಸಲು
ಗಕ್ಕನೆ ಮುಕ್ಕಿತ್ತದನೂ ಕೂಸು ||೫||
ಹಬ್ಬದ ಮನೆಯಲಿ ಕಣ್ಮರೆಯಾಗಿ
ಕಾನಂಗಿಯ ಗುಡಿ ಸೇರಿತು ಕೂಸು
ಬನ್ನಂಜೆಯವನೂ ಜತೆಗೂಡಿರಲು
ಪನ್ನಂಗಶಯನನಿಗೆರಗಿತು ಕೂಸು ||೬||
ಕುಂಜಾರಮ್ಮನ ಮುದ್ದಿನ ಕಂದ
ಆನಂದದ ಹೊಳೆ ಹರಿಸಿತು ಕೂಸು
ನೇಯಂಪಳ್ಳಿಯ ದೇವಳದಲ್ಲಿ
ಶಿವಪುರಾಣಿಕನ ತಿದ್ದಿತು ಕೂಸು ||೭||
ತಂದೆ ಮರೆತೊಂದು ಮರದ ಹೆಸರನು
ಥಟ್ಟನೆ ನೆನಪಿಸಿತು ದಿಟ್ಟ ಕೂಸು
ಕಾಣುವ ಕಣ್ಣಿಗೆ ಸಂತಸವೀಯುತ
ಯಜ್ಞೋಪವೀತವ ಧರಿಸಿತು ಕೂಸು ||೮||
ಮರೆಯಲಿ ಹೊಂಚುತ ಭುಸುಗುಡುತ್ತಿದ್ದ
ಘಟಸರ್ಪದ ತಲೆ ಚಚ್ಚಿತು ಕೂಸು
ತೋಟದ ಮನೆಯಲಿ ಪಾಠವ ಕೇಳುತ
ಗುರುವಿಗೆ ಪಾಠವ ಕಲಿಸಿತು ಕೂಸು ||೯||
ಲೋಕಕ್ಕೆಲ್ಲ ತತ್ವಾಮೃತ ಹಂಚಲು
ಸಂನ್ಯಾಸಿಯಾಗಲು ಬಯಸಿತು ಕೂಸು
ಅಚ್ಯುತಪ್ರಜ್ಞರ ಪುಣ್ಯದ ಪಾಕ
ದಂಡಕಮಂಡಲು ಹಿಡಿಯಿತು ಕೂಸು ||೧೦||
ಹದಿವರೆಯದಲೇ ಕಾವಿಯನುಟ್ಟು
ಗಂಗೆಯನುಡುಪಿಗೆ ಬರಿಸಿತು ಕೂಸು
ವಾದಿಸಿಂಹನಾ ಶುಷ್ಕ ತರ್ಕಗಳ
ಮುಗ್ಗಲು ಮುರಿಯಿತು ಈ ಕೂಸು ||೧೧||
ಬೌದ್ಧ ಕುಲಗುರು ಬುದ್ಧಿಸಾಗರನ
ಪೆದ್ದ ನಾಗಿಸಿತು ಗೆದ್ದು ಕೂಸು
ಆನಂದತೀರ್ಥರೆಂಬಭಿದಾನ ಪಡೆದು
ವೇದಾಂತ ರಾಜ್ಯವನಾಳಿತು ಕೂಸು ||೧೨||
ಅನಂತಶಯನನ ಪದಗಳಿಗೆರಗಿ
ಸೂತ್ರ ಪ್ರವಚನ ಗೈಯುತ ಕೂಸು
ತತ್ವಾಮೃತವನು ಎಲ್ಲರಿಗುಣಿಸುತ
ಶ್ರೀರಂಗನಾಥನಿಗೆರಗಿತು ಕೂಸು ||೧೩||
ಸಹಸ್ರನಾಮಕೆ ನೂರರ್ಥವೆನುತ
ಕವಿಗಳಿಗಚ್ಚರಿ ಬರಿಸಿತು ಕೂಸು
ಶ್ರೀಮದ್ಗೀತಾ ಭಾಷ್ಯವ ರಚಿಸಿ
ಬದರೀಶನ ಬಳಿ ಪಠಿಸಿತು ಕೂಸು ||೧೪||
ಬಾದರಾಯಣನ ಕಾಣಲಿಕೆಂದು
ವ್ಯಾಸಾಶ್ರಮಕೆ ತೆರಳಿತು ಕೂಸು
ನಾರಾಯಣನೇ ಹರಸುತಲಿತ್ತ
ಚಕ್ರಾಂಕಿತ ಶಿಲೆ ಪಡೆಯಿತು ಕೂಸು ||೧೫||
ಬಾದರಾಯಣನ ನಾದಿರಾಯಣನ
ಹರಕೆಯ ಹೊತ್ತು ಮರಳಿತು ಕೂಸು
ಸಕಲ ಶಾಸ್ತ್ರಗಳ ಕಡೆದೂ ಕಡೆದೂ
ಸೂತ್ರಕೆ ಭಾಷ್ಯವ ರಚಿಸಿತು ಕೂಸು ||೧೬||
ಕಾಲಿಗೆರಗಿದ ಶೋಭನಭಟ್ಟರ
ಪಾಲಿಗೆ ಕಲ್ಪದ್ರುಮವೀ ಕೂಸು
ಅಚ್ಯುತಪ್ರಜ್ಞರ ಒಳಗಣ್ ತೆರೆಸಿ
ಚಕ್ರ ಶಂಖಗಳ ನೊತ್ತಿತು ಕೂಸು ||೧೭||
ಹುಟ್ಟೂರಿನಿಂದ ಉಡುಪಿಗೆ ಬಂದ
ಕೃಷ್ಣನ ಕಡಲಿಂದೆತ್ತಿತು ಕೂಸು
ತನಗೊಲಿದು ಬಂದನ ಆನಂದ ಕಂದನ
ಉಡುಪಿಯಲ್ಲಿ ನೆಲೆಗೊಳಿಸಿತು ಕೂಸು ||೧೮||
ಈಶ್ವರದೇವನ ಅಗೆಯಲು ಹಚ್ಚಿ
ಕೆರೆಯಲಿ ನೀರನು ಹರಿಸಿತು ಕೂಸು
ದೋಣಿಯೆ ಇಲ್ಲದ ಗಂಗೆಯ ದಾಟಿ
ಮುಸಲರ ನಾಡಿಗೆ ನಡೆಯಿತು ಕೂಸು ||೧೯||
ಅಲ್ಲಾ ಎನ್ನುವ ಮುಲ್ಲಾಗಳಿಗೂ
ಎಲ್ಲಾ ಹರಿ ಹೆಸರೆಂದಿತು ಕೂಸು
ಮೆಚ್ಚಿದ ನವಾಬ ಜಹಗೀರಿತ್ತರೆ
ಮುಟ್ಟದೆ ಬದರಿಗೆ ತೆರಳಿತು ಕೂಸು ||೨೦||
ಕಾಡಿನ ದರೋಡೆಕೋರರ ತಡೆಯಲು
ಉಪೇಂದ್ರತೀರ್ಥರ ಕಳಿಸಿತು ಕೂಸು
ಹಸ್ತಿನಪುರದಲಿ ಮೈವೆತ್ತು ಬಂದು
ನಮಿಸಿದ ಗಂಗೆಯ ಹರಸಿತು ಕೂಸು ||೨೧||
ಹತ್ತು ಮತ್ತೂ ಐದು ಜಟ್ಟಿ ಶಿಷ್ಯರನು
ಒಟ್ಟಿಗೆ ಜಾಡಿಸಿದ ಗಟ್ಟಿಗ ಕೂಸು
ಹರಿಯಾಣತಿ ಬಲದಿಂದಲೇ ಭಾರತ-
ತಾತ್ಪರ್ಯ ನಿರ್ಣಯ ರಚಿಸಿತು ಕೂಸು ||೨೨||
ಸಪಾದ ಲಕ್ಷ ಗ್ರಂಥವನೊಂದೇ
ವಾಕ್ಯದಿ ಖಂಡಿಸಿ ನಕ್ಕಿತು ಕೂಸು
ಮದವೂರಿನ ಮದನೇಶ್ವರದಲಿ
ದೊರೆ ಜಯಸಿಂಹನ ಹರಸಿತು ಕೂಸು ||೨೩||
ಕಾಲಡಿ ಕೆಂಪು ಉಗುರೂ ಕೆಂಪು
ತಂಪೋ ತಂಪು ಏಳಡಿ ಕೂಸು
ಹದ್ದಿನ ಹರಡು ಮೊಣಕಾಲುರುಟು
ಆನೆಯ ಸೊಂಡಿಲೆ ತೊಡೆ ಗಡ ಕೂಸು ||೨೪||
ಕಾವೀ ಸುತ್ತಿದ ಸೂಂಟವೆ ಸೊಗಸು
ಮೂರು ಲೋಕಕೆ ಒಡೆಯನು ಕೂಸು
ಹೆಗಲಲುಣ್ಣೆಯ ಶಾಲು ಅಜಾನು ತೋಳು
ಚಂದಿರನ ನಾಚಿಸುವ ಚೆಲುಮೊಗದ ಕೂಸು ||೨೫||
ಮೂರು ವಿಕ್ರಮದ ಪೆಜತ್ತಾಯರೀಗೆ
ಪರಮಾನುಗ್ರಹ ಮಾಡಿದ ಕೂಸು
ಏಳೆಂಟು ದಿನದ ಹದವಾದ ವಾದದಲಿ
ಪಂಡಿತಾಚಾರ್ಯರನು ಗೆದ್ದ ಕೂಸು ||೨೬||
ಪಂಡಿತರಿಗೂ ಪಂಡಿತ ಲಿಕುಚ ಪಂಡಿತರಿಂದ
ತತ್ವಪ್ರದೀಪವ ಬರೆಸಿತು ಕೂಸು
ಅವರ ಕೋರಿಕೆಯಂತೆ ತಾನನುವ್ಯಾಖ್ಯಾನ
ನಮಗೆ ಕರುಣಿಸಿತು ಕರುಣಾಳು ಕೂಸು ||೨೭||
ನಾಕು ಶಿಷ್ಯರ ಕೈಲಿ ನಾಲ್ಕು ಅಧ್ಯಾಯಗಳ
ಒಟ್ಟಿಗೆ ಒರೆದು ಬರೆಯಿಸಿದ ಕೂಸು
ತನ್ನ ಸೋದರಗೆ ತಪಸಿನಾಗರಗೆ
ಸನ್ಯಾಸ ದೀಕ್ಷೆಯನಿತ್ತ ಕೂಸು ||೨೮||
ಎಲ್ಲರ ಮೀರಿಸಿ ಎತ್ತರಕೇರಿಸಿ
ಪ್ರಣವದ ಗುಟ್ಟನ್ನರುಹಿತು ಕೂಸು
ಒಟ್ಟು ಒಂಭತ್ತು ಯತಿಗಳಿಗೆ ಕೂಡಿ
ವೇದಾಂತ ರಾಜ್ಯವನಿತ್ತಿತು ಕೂಸು ||೨೯||
ಸಂಗೀತ ಹಾಡುತ್ತ ಕೊರಡು ಚಿಗುರಿಸಿತು
ಗಂಧರ್ವರನು ನಾಚಿಸಿ ಕೂಸು
ನರಹರಿ ತೀರ್ಥರ ಮುನ್ದಿರಿಸುತ್ತ
ಯಕ್ಶಗಾನವನು ರಚಿಸಿತು ಕೂಸು ||೩೦||
ಹಸುರು ಕಾಳನ್ನು ಹಿಡಿದು ಜಪಿಸುತ್ತ
ಮೊಳಕೆ ಬರಿಸಿತು ಮಂತ್ರತಜ್ಞ ಕೂಸು
ಗ್ರಹಣದ ಕತ್ತಲಲ್ಲಿ ಕಾಲುಗುರ ಬೆಳಕಿಂದ
ಪಾಠ ಮಾಡಿದ ತೇಜಃಪುಂಜಃ ಕೂಸು ||೩೧||
ಭಾರಿ ಬಂಡೆಯನು ಒಂದೆ ಕೈಲೆತ್ತಿ
ತುಂಗಭದ್ರೆಯ ತಡಿಯಲಿಟ್ಟಿತು ಕೂಸು
ತುರಗಣ ಮೆಚ್ಚಿ ಹೂ ಮಳೆ ಗರೆಯಲು
ದಿವ್ಯ ಪ್ರವಚನ ನೀಡಿತು ಕೂಸು ||೩೨||
ಮಾಘ ಮಾಸದ ನವಮಿಯಂದು
ತಾನೊಬ್ಬನೆ ಬದರಿಗೆ ತೆರಳಿತು ಕೂಸು
ಮರೆಯಲಿ ನಮ್ಮ ಹರಸುತ್ತಿರುವ
ಗೋವಿಂದ ವಿಠ್ಠಲನ ಮೋಕೆಯ ಕೂಸು ||೩೩||
pUjya gurugaLAda bannaMje gOviMdAcAryaru
AcArya madhvara kuritu racisida padya |
kELiri kELiri ceMdada katheya
uDupiya kRuShNana taMdana katheya |pa|
koDabEDi koDabEDi oMdu cikkAsu
hALu mADadiri bALinoMdoMdu tAsu |a .pa|
dEvara ANati taleyali hottu
aMjaneyudaradi huTTitu kUsu
bAlada beMkiya riMgaNadiMda
laMkApaTTaNa suTTitu kUsu || 1 ||
rakkasarella bekkasa beragu
rAvaNanedegE gudditu kUsu
kapigaLa kila kila kELisadAga
gaMdhamAdanava nettitu kUsu || 2 ||
hAruvanA mane makkaLanuLisalu
baMDi annavanu uMDitu kUsu
aragina maneyanu beMkiyalirisi
pAMcAliya kai hiDiyitu kUsu ||3||
tannaragiNigE hUvanu taralu
maNimaMtana tale maNisitu kUsu
ELu hannoMdeduredurAgalu
kuruDana makkaLa mugisitu kUsu ||4||
dEvara ANati taleyali hottu
pAjakadali maruhuTTitu kUsu
beMda huruLiyanu akka tinnisalu
gakkane mukkittadanU kUsu ||5||
habbada maneyali kaNmareyAgi
kAnaMgiya guDi sEritu kUsu
bannaMjeyavanU jategUDiralu
pannaMgaSayananigeragitu kUsu ||6||
kuMjArammana muddina kaMda
AnaMdada hoLe harisitu kUsu
nEyaMpaLLiya dEvaLadalli
SivapurANikana tidditu kUsu ||7||
taMde maretoMdu marada hesaranu
thaTTane nenapisitu diTTa kUsu
kANuva kaNNige saMtasavIyuta
yaj~jOpavItava dharisitu kUsu ||8||
mareyali hoMcuta BusuguDuttidda
GaTasarpada tale caccitu kUsu
tOTada maneyali pAThava kELuta
guruvige pAThava kalisitu kUsu ||9||
lOkakkella tatvAmRuta haMcalu
saMnyAsiyAgalu bayasitu kUsu
acyutapraj~jara puNyada pAka
daMDakamaMDalu hiDiyitu kUsu ||10||
hadivareyadalE kAviyanuTTu
gaMgeyanuDupige barisitu kUsu
vAdisiMhanA SuShka tarkagaLa
muggalu muriyitu I kUsu ||11||
bauddha kulaguru buddhisAgarana
pedda nAgisitu geddu kUsu
AnaMdatIrthareMbaBidAna paDedu
vEdAMta rAjyavanALitu kUsu ||12||
anaMtaSayanana padagaLigeragi
sUtra pravacana gaiyuta kUsu
tatvAmRutavanu ellariguNisuta
SrIraMganAthanigeragitu kUsu ||13||
sahasranAmake nUrarthavenuta
kavigaLigaccari barisitu kUsu
SrImadgItA BAShyava racisi
badarISana baLi paThisitu kUsu ||14||
bAdarAyaNana kANalikeMdu
vyAsASramake teraLitu kUsu
nArAyaNanE harasutalitta
cakrAMkita Sile paDeyitu kUsu ||15||
bAdarAyaNana nAdirAyaNana
harakeya hottu maraLitu kUsu
sakala SAstragaLa kaDedU kaDedU
sUtrake BAShyava racisitu kUsu ||16||
kAligeragida SOBanaBaTTara
pAlige kalpadrumavI kUsu
acyutapraj~jara oLagaN teresi
cakra SaMKagaLa nottitu kUsu ||17||
huTTUriniMda uDupige baMda
kRuShNana kaDaliMdettitu kUsu
tanagolidu baMdana AnaMda kaMdana
uDupiyalli nelegoLisitu kUsu ||18||
ISvaradEvana ageyalu hacci
kereyali nIranu harisitu kUsu
dONiye illada gaMgeya dATi
musalara nADige naDeyitu kUsu ||19||
allA ennuva mullAgaLigU
ellA hari hesareMditu kUsu
meccida navAba jahagIrittare
muTTade badarige teraLitu kUsu ||20||
kADina darODekOrara taDeyalu
upEMdratIrthara kaLisitu kUsu
hastinapuradali maivettu baMdu
namisida gaMgeya harasitu kUsu ||21||
hattu mattU aidu jaTTi SiShyaranu
oTTige jADisida gaTTiga kUsu
hariyANati baladiMdalE BArata-
tAtparya nirNaya racisitu kUsu ||22||
sapAda lakSha graMthavanoMdE
vAkyadi KaMDisi nakkitu kUsu
madavUrina madanESvaradali
dore jayasiMhana harasitu kUsu ||23||
kAlaDi keMpu ugurU keMpu
taMpO taMpu ELaDi kUsu
haddina haraDu moNakAluruTu
Aneya soMDile toDe gaDa kUsu ||24||
kAvI suttida sUMTave sogasu
mUru lOkake oDeyanu kUsu
hegalaluNNeya SAlu ajAnu tOLu
caMdirana nAcisuva celumogada kUsu ||25||
mUru vikramada pejattAyarIge
paramAnugraha mADida kUsu
ELeMTu dinada hadavAda vAdadali
paMDitAcAryaranu gedda kUsu ||26||
paMDitarigU paMDita likuca paMDitariMda
tatvapradIpava baresitu kUsu
avara kOrikeyaMte tAnanuvyAKyAna
namage karuNisitu karuNALu kUsu ||27||
nAku SiShyara kaili nAlku adhyAyagaLa
oTTige oredu bareyisida kUsu
tanna sOdarage tapasinAgarage
sanyAsa dIkSheyanitta kUsu ||28||
ellara mIrisi ettarakErisi
praNavada guTTannaruhitu kUsu
oTTu oMBattu yatigaLige kUDi
vEdAMta rAjyavanittitu kUsu ||29||
saMgeeta hADutta koraDu chigurisitu
gaMdharvaranu nAchisi kUsu
narahari tIrthara mundirisutta
yakshagAnavanu rachisitu kUsu ||30||
hasuru kALannu hiDidu japisutta
moLake barisitu maMtrataj~ja kUsu
grahaNada kattalalli kAlugura beLakiMda
pATha mADida tEjaHpuMjaH kUsu ||31||
BAri baMDeyanu oMde kailetti
tuMgaBadreya taDiyaliTTitu kUsu
turagaNa mecci hoo maLe gareyalu
divya pravachana neeDitu koosu ||32||
mAgha maasada navamiyaMdu
tAnobbane badarige teraLitu kUsu
mareyali namma harasuttiruva
gOviMda viThThalana mOkeya kUsu ||33||
Leave a Reply