Amboruhekshane

Composer : Shri Vidyaprasanna Teertharu

Mrs.Sashirekha

ಅಂಬೋರುಹೇಕ್ಷಣೆ ಲಂಬಾಲಕೇ ಜಗ- |
ದಂಬಾ ಪೊರೆಯೆ ಸತತ ಗಂಭೀರ ಗಜಗಮನೆ || ಪ ||

ನಂಬಿದೆ ನಿನ್ನ ಪದಾಂಬುಜಯುಗಳವ |
ಕಂಬು ಕಂಧರಿ ಕನಕಾಂಬರ ಧಾರಿಣಿ |
ಬೆಂಬಲವೀಯೆ ವಿಳಂಬವ ಮಾಡದೆ || ಅ. ಪ. ||

’ಯಂಕಾಮಯೇ ತ್ಯಾದಿ’ ಶೃತಿಗಳೆಲ್ಲಾ |
ಪಂಕಜಭವಮುಖ ಸುಮನಸರು |
ಕಿಂಕರರೆನ್ನುತ ಪೊಗಳುತಿರಲು |
ಶಂಕೆಯುಂಟೆ ನಿನ್ನ ಮಹಿಮೆಗಳಲ್ಲಿ |
ಶಶಾಂಕ ಸೋದರಿ ಆತಂಕ ಬಿಡಿಸೆ || ೧ ||

ನೀರಜಾತ ಗಣ ಕೃತ ನಿಲಯೇ |
ಮಾರಜನಕ ಹರಿ ಪ್ರಿಯ ಜಾಯೆ |
ಕೋರುವೆ ನಿನ್ನಯ ಪರಮದಯೇ |
ಸಾರಸಾಕ್ಷಿ ಸರಿಯಾರು ನಿನಗೆ ಕರು-|
ಣಾರಸಮಯೆ ಸುವಿಶಾರದೆ ಜನನಿ || ೨ ||

ಪನ್ನಗವೇಣಿ ಸಾಗರನ ಕನ್ಯೆ |
ನಿಖಿಲ ಸುರನರರೊಳಗೆ ಮಾನ್ಯೇ |
ನಿನ್ನ ಪೋಲುವರು ಅನ್ಯರುಂಟೆ |
ನಿನ್ನ ದಾಸನಾದ ಎನ್ನ ಮನೋರಥ- |
ವನ್ನು ತಿಳಿಸೆ ಪ್ರಸನ್ನ ಶ್ರೀ ಹರಿಯಲಿ || ೩ ||


aMbOruhEkShaNe laMbaalakE jaga- |
daMbaa poreye satata gaMbhIra gajagamane || pa ||

naMbide ninna padaaMbujayugaLava |
kaMbu kaMdhari kanakaaMbara dhaariNi |
beMbalavIye viLaMbava maaDade || a. pa. ||

‘yaMkaamayE tyaadi’ shRutigaLellaa |
paMkajabhavamukha sumanasaru |
kiMkararennuta pogaLutiralu |
shaMkeyuMTe ninna mahimegaLalli |
shashaaMka sOdari aataMka biDise || 1 ||

nIrajaata gaNa kRuta nilayE |
maarajanaka hari priya jaaye |
kOruve ninnaya paramadayE |
saarasaakShi sariyaaru ninage karu-|
Naarasamaye suvishaarade janani || 2 ||

pannagavENi saagarana kanye |
nikhila suranararoLage maanyE |
ninna pOluvaru anyaruMTe |
ninna daasanaada enna manOratha- |
vannu tiLise prasanna shrI hariyali || 3 ||

Leave a Reply

You might also like

error: Content is protected !!