Kandu kandu nee enna

Composer : Shri Purandara dasaru

ಕಂಡು ಕಂಡು ನೀ ಎನ್ನ ಕೈ ಬಿಡುವರೇ ಕೃಷ್ಣ
ಪುಂಡರೀಕಾಕ್ಷ ಶ್ರೀ ಪುರುಷೋತ್ತಮ |ಪ|

ಬಂಧುಗಳು ಎನಗಿಲ್ಲ ಬದುಕಿನಲಿ ಸುಖವಿಲ್ಲ
ನಿಂದೆಯಲಿ ನೊಂದೆನೈಯ್ಯ ನೀರಜಾಕ್ಷ
ತಂದೆ ತಾಯಿಯು ನೀನೆ ಬಂಧು ಬಳಗವು ನೀನೆ
ಎಂದೆಂದಿಗೂ ನಿನ್ನ ನಂಬಿದೆನೋ ಕೃಷ್ಣಾ ||೧||

ಕ್ಷಣವೊಂದು ಯುಗವಾಗಿ ತೃಣಕಿಂತ ಕಡೆಯಾಗಿ
ಎಣಿಸಲಾರದ ಭವದಿ ಕಡುನೊಂದೆ ನಾನು
ಸನಕಾದಿ ಮುನಿವಂದ್ಯ ವನಜಸಂಭವ ಜನಕ
ಫಣಿಶಾಯಿ ಪ್ರಹ್ಲಾದಗೊಲಿದ ಶ್ರೀಕೃಷ್ಣಾ ||೨||

ಭಕ್ತವತ್ಸಲನೆಂಬ ಬಿರುದು ಪೊತ್ತಾ ಮೇಲೆ
ಭಕ್ತರಾಧೀನನಾಗಿ ಇರಬೇಡವೆ
ಮುಕ್ತಿದಾಯಕ ನೀನು ಹೊನ್ನೂರು ಪುರವಾಸ
ಶಕ್ತಗುರು ಪುರಂದರವಿಠಲ ಶ್ರೀಕೃಷ್ಣಾ ||೩||


kaMDu kaMDu nI enna kai biDuvarE kRuShNa
puMDarIkAkSha SrI puruShOttama |pa|

baMdhugaLu enagilla badukinali suKavilla
niMdeyali noMdenaiyya nIrajAkSha
taMde tAyiyu nIne baMdhu baLagavu nIne
eMdeMdigU ninna naMbidenO kRuShNA ||1||

kShaNavoMdu yugavAgi tRuNakiMta kaDeyAgi
eNisalArada Bavadi kaDunoMde nAnu
sanakAdi munivaMdya vanajasaMBava janaka
PaNiSAyi prahlAdagolida SrIkRuShNA ||2||

BaktavatsalaneMba birudu pottA mEle
BaktarAdhInanAgi irabEDave
muktidAyaka nInu honnUru puravAsa
Saktaguru puraMdaraviThala SrIkRuShNA ||3||

Leave a Reply

You might also like

error: Content is protected !!