Ido shiva banda

Composer : Shri Kakhandaki krishnadasaru

By Smt.Shubhalakshmi Rao

ಇದೋ ಶಿವ ಬಂದಾ
ವೇದಾಂತ ವೇದ ದಯೋದದಿ ಬಂದಾ [ಪ]

ಇಂದುಧರನು ಬಂದಾ ಕಂದುಗೋರಳ ಬಂದಾ
ನಂದಿವಾಹನ ಚಿದಾನಂದನು ಬಂದಾ (೧)

ಶಂಭುಶಂಕರ ಬಂದಾ ಜಂಭಾರಿಸುತ ಬಂದಾ
ಅಂಬಿಕಾರಮಣ ತ್ರಯಂಬಕ ಬಂದಾ (೨)

ಕಂತು ಹರನು ಬಂದಾ ಅಂತರಾತ್ಮನು ಬಂದಾ
ಚಿಂತಿತಾರ್ಥೀವ ತ್ರಿಪುರಾಂತಕ ಬಂದಾ (೩)

ಗಂಗಾಧರನು ಬಂದಾ ಮಂಗಳಾಂಗನು ಬಂದಾ
ಸಂಗ ರಹಿತ ಮಹಾಲಿಂಗನು ಬಂದಾ (೪)

ಉರಗ ಭೂಷಣ ಬಂದಾ ಸುರರ ಪೋಷಣ ಬಂದಾ
ಗುರು ಮಹಿಪತಿ ಪ್ರಭು ಕರುಣದಿ ಬಂದಾ (೫)


idO Siva baMdA
vEdAMta vEda dayOdadi baMdA [pa]

iMdudharanu baMdA kaMdugOraLa baMdA
naMdivAhana cidAnaMdanu baMdA (1)

SaMBuSaMkara baMdA jaMBArisuta baMdA
aMbikAramaNa trayaMbaka baMdA (2)

kaMtu haranu baMdA aMtarAtmanu baMdA
ciMtitArthIva tripurAMtaka baMdA (3)

gaMgAdharanu baMdA maMgaLAMganu baMdA
saMga rahita mahAliMganu baMdA (4)

uraga BUShaNa baMdA surara pOShaNa baMdA
guru mahipati praBu karuNadi baMdA (5)

Leave a Reply

You might also like

error: Content is protected !!