Surya bimbagata Narayana

Composer : Shri Tupaki Venkataramanacharya

By Smt.Shubhalakshmi Rao

ಸೂರ್ಯಬಿಂಬಗತ ನಾರಾಯಣನನು
ಸೇರಿರುವೆನು ಸತತ,
ಹಾರ ಮಕುಟ ಕೇಯೂರ ಕುಂಡಲಧರ
ಸಾರಸಜಾಸನ ಹೈರಣ್ಯವಪುಷನ [ಪ]

ಸರ್ಗಸ್ಥಿತಿಗತಿ ಕಾರಣ ವ್ಯಾಹೃತಿ ಗರ್ವವೇದ್ಯ ಚರಣಾ,
ಭರ್ಗ ಶಬ್ದಿತ ತೇಜೋಧಾರಣ ಸ್ವರ್ಗವಾಸಿ ಶರಣಾ,
ಭಾರ್ಗವಿ ಮುಖ ಸಂಸರ್ಗಾನನ ಮತಿ
ವರ್ಗಕೇ ತ್ವತೈದ ಮಾರ್ಗವ ತೋರಿಸು [೧]

ಸೂರಿಗಮ್ಯ ಪದ ವಾರಿಜ ಸುರ ಪರಿವಾರ ನಿನ್ನ ಕರುಣಾ,
ತೋರು ಭೌತಿಕ ಶರೀರ ದಾರ್ಢ್ಯ ಮೂರಾರು ಭಕುತಿ ನವ,
ನಾರದಾದಿ ಮುನಿ ವಂದಿತ ನಿನ್ನಾ-
ಧಾರವ ನಂಬಿದೆ ನೀರಜ ಬಾಂಧವ [೨]

ಈ ಜಗದೊಳು ಬಹು ಸೋಜಿಗದೋರುವ ರಾಜರಾಜ ನೀನೆ,
ರಾಜಸೂಯಯುತ ವಾಜಿಮೇಧ ಕೃದ್ರಾಜನ ಮೈದುನನೆ,
ಓಜೋಬಲ ಬಹು ತೇಜದ ಪನ್ನಗ,
ರಾಜ ಗಿರೀಂದ್ರ ವಿರಾಜಿತ ಕರುಣಿಸು [೩]


sUryabiMbagata nArAyaNananu
sEriruvenu satata,
hAra makuTa kEyUra kuMDaladhara
sArasajAsana hairaNyavapuShana [pa]

sargasthitigati kAraNa vyAhRuti garvavEdya caraNA,
Barga Sabdita tEjOdhAraNa svargavAsi SaraNA,
BArgavi muKa saMsargAnana mati
vargakE tvataida mArgava tOrisu [1]

sUrigamya pada vArija sura parivAra ninna karuNA,
tOru Bautika SarIra dArDhya mUrAru Bakuti nava,
nAradAdi muni vaMdita ninnA-
dhArava naMbide nIraja bAMdhava [2]

I jagadoLu bahu sOjigadOruva rAjarAja nIne,
rAjasUyayuta vAjimEdha kRudrAjana maidunane,
OjObala bahu tEjada pannaga,
rAja girIMdra virAjita karuNisu [3]

Leave a Reply

You might also like

error: Content is protected !!