Haadi meredu bandanalle

Composer : Shri Purandara dasaru

ಹಾದಿ ಮೆರೆದು ಬಂದನಲ್ಲೇ
ಮನ್ನಾರು ಕೃಷ್ಣ,
ಬೀದಿ ಮೆರೆದು ಬಂದನಲ್ಲೇ ||ಪ||

ನಂದಗೋಕುಲದಿ ಪುಟ್ಟಿ
ಬೃಂದಾವನದೊಳಗಾಡಿ
ಇಂದಿರೇಶ ಬಂದನಲ್ಲೇ
ಮನ್ನಾರು ಕೃಷ್ಣ ||೧||

ನೀಲದೊಡವೆ ಗೆಜ್ಜೆ ಇಟ್ಟು
ಕಾಲಲಂದುಗೆ ಕಡಗ ತೊಟ್ಟು
ನೀಲವರ್ಣ ಬಂದನಲ್ಲೇ
ಮನ್ನಾರು ಕೃಷ್ಣ ||೨||

ಹಾರ ತುರುಬು ಚೌರಿ ಮುಲ್ಲೆ
ಅರಳೆಲೆ ಗೊಂಡೆನಿಟ್ಟು
ವಾರಿಜಾಕ್ಷ ಬಂದನಲ್ಲೇ
ಮನ್ನಾರು ಕೃಷ್ಣ ||೩||

ಕಡೆಗೋಲ ನೇಣನೆ ಪಿಡಿದು
ಕಡಗದ ಮರವನೇರಿ
ಉಡುಪಿ ಕೃಷ್ಣ ಬಂದನಲ್ಲೇ
ಮನ್ನಾರು ಕೃಷ್ಣ ||೪||

ಮಾರನ ಪಿತಾ ತಾನು
ದ್ವಾರಕೆಯ ವಾಸನೆಂದು
ಪುರಂದರವಿಠಲ ಬಂದನಲ್ಲೇ
ಮನ್ನಾರು ಕೃಷ್ಣ ||೫||


hAdi meredu baMdanallE
mannAru kRuShNa,
bIdi meredu baMdanallE ||pa||

naMdagOkuladi puTTi
bRuMdAvanadoLagADi
iMdirESa baMdanallE
mannAru kRuShNa ||1||

nIladoDave gejje iTTu
kAlalaMduge kaDaga toTTu
nIlavarNa baMdanallE
mannAru kRuShNa ||2||

hAra turubu couri mulle
araLele goMDeniTTu
vArijAkSha baMdanallE
mannAru kRuShNa ||3||

kaDegOla nENane piDidu
kaDagada maravanEri
uDupi kRuShNa baMdanallE
mannAru kRuShNa ||4||

mArana pitA tAnu
dvArakeya vAsaneMdu
puraMdaraviThala baMdanallE
mannAru kRuShNa ||5||

Leave a Reply

You might also like

error: Content is protected !!