Composer : Shri Gurujagannatha dasaru
ಗುರು ರಾಘವೇಂದ್ರ , ಯತಿ ರಾಘವೇಂದ್ರ,
ಪ್ರಭು ರಾಘವೇಂದ್ರ, ಶ್ರೀ ರಾಘವೇಂದ್ರ
ರಾಘವೇಂದ್ರರಾಯಾ
ಈಗ ಕಾಯೋ ಎನ್ನ ಜೀಯಾ [ಪ]
ನಿಜಾಕುಮುದ ಚಂದ್ರಾ ಸಾಂದ್ರಾ
ಭಜಾಮಿ ಯತಿ ಇಂದ್ರಾ ತಂದ್ರಾ
ತ್ಯಜಾನೆಗೈಸಿ ಎನ್ನ ನಿಜಾಮನದಿ ಪಾದ
ಭಜಾನೆಗೈವಂತೆ – ನಿಜಾ ಮನವನಿತ್ತು [೧]
ದುರಾಳ ಸಂಗದಿಂದಾ ನೊಂದಾ
ತರಾಳ ಭವದಿಂದಾ ಬೆಂದಾ
ಮರೂಳು ಭವದೊಳು – ಉರೂಳುತೀಪರಿ
ತರಾಳೆ ಸಂಗದಿ ಮನ – ಮರೂಳುಗೊಂಡೆನೊ [೨]
ದಾತಾ ನೀನೆ ಎನ್ನಾ ಇನ್ನಾ
ಮಾತೂ ಲಾಲಿಸೊ ಘನ್ನಾ ಚನ್ನಾ
ತಾತಾ ಗುರುಜಗನ್ನಾಥಾ ವಿಠಲ ಪಾದ
ಪಾಥೋಜ ಮನ ನಿಕೇತನದಲಿ ತೋರಿ [೩]
guru rAghavEMdra , yati rAghavEMdra,
prabhu rAghavEMdra, shrI rAghavEMdra
rAGavEMdrarAyA
Iga kAyO enna jIyA [pa]
nijAkumuda caMdrA sAMdrA
BajAmi yati iMdrA taMdrA
tyajAnegaisi enna nijAmanadi pAda
BajAnegaivaMte – nijA manavanittu [1]
durALa saMgadiMdA noMdA
tarALa BavadiMdA beMdA
marULu BavadoLu – urULutIpari
tarALe saMgadi mana – marULugoMDeno [2]
dAtA nIne ennA innA
mAtU lAliso GannA cannA
tAtA gurujagannAthA viThala pAda
pAthOja mana nikEtanadali tOri [3]

Leave a Reply
You must be logged in to post a comment.