Purandara gururaya

Composer : Shri Shyamasundara dasaru

ಪುರಂದರ ಗುರುರಾಯಾ ಪಿಡಿಯೊ ಕೈಯಾ [ಪ]

ಧಾರುಣಿಯೊಳು ಚಿನಿವಾರನಾಗಿ ಅವ
ತಾರ ಮಾಡಿದ ಸದಯಾ (೧)

ಕಡು ಲೋಭದಿ ನೀ ನಡೆಯಲು ಮಡದಿಯಿಂ
ಪಡೆದೆಯೋ ಹರಿಕೃಪೆಯಾ (೨)

ಧನ ಕನಕಾದಿಗಳ ತೃಣಕೆ ಬಗೆದು
ದ್ವಿಜ ಗಣಕೆ ನೀಡಿದಯ್ಯ ಪಿಡಿ ಕೈಯ್ಯ (೩)

ವ್ಯಾಸರಾಯರುಪದೇಶವ ಪೊಂದಿದ
ನೀ ಸುರನಿಭ ಕಾಯಾ (೪)

ದೃಹಿಣಿಕುಮಾರ ಮಹಿತ ದೃತಕರ
ಮಹಿ ಸುಮನಸರೊಡೆಯಾ (೫)

ನರಕದಿ ನರಳುವ ನರರುದ್ಧರಿಸಿದ
ಹರಿ ಶರಣ ಶಿರಿಯಾ (೬)

ಸರಳ ಕನ್ನಡದಿ ಮರುತ ಸುಶಾಸ್ತ್ರದಿ
ತಿರುಳು ತಿಳುಹಿದಾರ್ಯ (೭)

ಸೂರಿವರೇಣ್ಯನೆ ಶೌರಿಯ ಕೂಡಿ
ತೋರಿದ ಶುಭ ಚರಿಯಾ (೮)

ಗೋಮಿನಿ ನಾಯಕ ಕಾಮಿತದಾಯಕ
ಶಾಮಸುಂದರ ಪ್ರೀಯಾ (೯)


puraMdara gururAyA piDiyo kaiyA [pa]

dhAruNiyoLu cinivAranAgi ava
tAra mADida sadayA (1)

kaDu lOBadi nI naDeyalu maDadiyiM
paDedeyO harikRupeyA (2)

dhana kanakAdigaLa tRuNake bagedu
dvija gaNake nIDidayya piDi kaiyya (3)

vyAsarAyarupadESava poMdida
nI suraniBa kAyA (4)

dRuhiNikumAra mahita dRutakara
mahi sumanasaroDeyA (5)

narakadi naraLuva nararuddharisida
hari SaraNa SiriyA (6)

saraLa kannaDadi maruta suSAstradi
tiruLu tiLuhidArya (7)

sUrivarENyane Sauriya kUDi
tOrida SuBa cariyA (8)

gOmini nAyaka kAmitadAyaka
SAmasuMdara prIyA (9)

Leave a Reply

You might also like

error: Content is protected !!