Composer : Shri Purandara dasaru
ಏನು ಮಾಡಿದರೇನು ಹಿಂದಿನ ಕರ್ಮ ಫಲ
ತಾನು ಮಾಡಿದ ಕರ್ಮ ತನಗಲ್ಲದೆ [ಪ]
ಮರಳಿ ಮರಳಿ ನೀರಿನೊಳಗೆ ಪೊಕ್ಕರು ಇಲ್ಲ
ಹೊರೆ ಹೊತ್ತು ತಲೆ ಪರಟಿಯಾದರಿಲ್ಲ |
ಭರದಿಂದ ಭೂಮಿಯನ್ನು ತೋಡಿ ನೋಡಿದರಿಲ್ಲ
ಪರರಿಗೆ ಬಾಯಿದೆರೆದು ಪಲ್ಕಿರಿದರಿಲ್ಲ [೧]
ಬಲು ದೇಹವನು ಹ್ರಸ್ವ ಮಾಡಿ ಬೇಡಿದರಿಲ್ಲ
ಕುಲಗೇಡಿ ತಾನಾಗಿ ತಿರುಗಿದರಿಲ್ಲ |
ತಲೆಯ ಜಡೆ ಗಟ್ಟಿ ಅರಣ್ಯ ಸೇರಿದರಿಲ್ಲ
ಕೊಳಲೂದಿ ತುರುಗಳನು ಕೈದರಿಲ್ಲ [೨]
ಧೀರತನವನು ಬಿಟ್ಟು ದಿಗಂಬರಾದರು ಇಲ್ಲ
ಮೀರಿ ರಾವುತನಾಗಿ ಹೋರಿದರಿಲ್ಲ |
ಧಾರಾಣಿಯೊಳಪ್ರತಿಮ ಪುರಂದರ ವಿಠ್ಠಲನೇ
ಆರಿಗಳವಯ್ಯ ವಿಧಿ ಮೀರಿ ಬಾಳುವರೇ [೩]
Enu mADidarEnu hiMdina karma Pala
tAnu mADida karma tanagallade [pa]
maraLi maraLi nIrinoLage pokkaru illa
hore hottu tale paraTiyAdarilla |
BaradiMda BUmiyannu tODi nODidarilla
pararige bAyideredu palkiridarilla [1]
balu dEhavanu hrasva mADi bEDidarilla
kulagEDi tAnAgi tirugidarilla |
taleya jaDe gaTTi araNya sEridarilla
koLalUdi turugaLanu kaidarilla [2]
dhIratanavanu biTTu digaMbarAdaru illa
mIri rAvutanAgi hOridarilla |
dhArANiyoLapratima puraMdara viThThalanE
ArigaLavayya vidhi mIri bALuvarE [3]

Leave a Reply
You must be logged in to post a comment.