Vittala vimala sheela

Composer : Shri Vijayadasaru

By Smt.Shubhalakshmi Rao

ವಿಠಲ ವಿಮಲ ಶೀಲ ಬಾಲಗೋಪಾಲ
ದಿಟ್ಟಮೂರುತಿ ಶ್ರೀಲೋಲ [ಪ]
ಅಟ್ಟುವ ಖಳರೆದೆ ಕುಟ್ಟಿ ಕೆಡಹಿ ಮತಿ ಗೋಟ್ಟು ಸಲಹೊ
ಜಗಜಟ್ಟಿ ಫಂಡರೀರಾಯ [ಅ ಪ]

ಯದುವಂಶೋದ್ಭವ ಕೇಶವ ಏಕಾಮೇವ
ಮಧುವೈರಿ ಮಹಾವೈಭವ
ಸದಮಲಾನಂದ ಭಾವ
ಮತ್ಕುಲದೈವ ಹೃದಯಾಬ್ಜ ಇನ ಬಾಂಧವ
ವಿಧಿನದಿಪಿತ ನಾರದಮುನಿ ಸನ್ನುತ
ಕದನ ಕರ್ಕಶ ವಾರಿದನಿಭಗ
ಪಾದೋ ಪಾದಿಗೆ ಸಂಪದವನು ಬಯಸುವ
ಮೃದುಮನದಲ್ಲಿ ನಿಲ್ಲೊ ಪದುಮಿಣಿ ವಲ್ಲಭ [೧]

ನುತಿಸಾರ ದೇವ ಪಾರ್ಥಿವ ನಿತ್ಯ ಪ್ರಭಾವ
ಪತಿತ ಪಾವನ ಸುರಜೀವ
ಅತಿಶಯ ಲೀಲಾ ಮಾನವ ನರ ಕಂಠೀರವ
ಚ್ಯುತ ದೂರನಾದಿ ಗುರುಗೋವ
ರತಿಪತಿ ಪಿತ ಶತಕ್ರತುಸುತ ಸಾರಥಿ
ತುತಿಸುವೆ ಗತಿಪಥ ಹಿತವಾದ ತೋರು
ಮಾರುತಮತ ನಂಬಿದ ಚತುರರ ಸಂಗತಿ
ಪ್ರತಿದಿನದಲಿ ಕೊಡು ಸತತ ಪ್ರಸನ್ನ [೨]

ಶರಣು ಶರಣು ಸರ್ವೆಶ ಇಟ್ಟಿಗೆವಾಸ
ದುರುಳರ ಸಂಗ ವಿನಾಶ
ಪಮಪುರುಷ ವಿಲಾಸ ನಿರವಕಾಶ
ವರಪ್ರದ ಪೂರ್ಣ ಪ್ರಕಾಶ
ಮೊರೆ ಹೊಕ್ಕೆನು ನಿನ್ನ ಚರಣ ಸರಸಿಜವ
ಹರಿಯೆನ್ನೊಳಗಿದ್ದು ಮರವೆ ಕಳೆದು ನಿನ್ನ
ಸ್ಮರಣೆ ಮಾಡುವಂತೆ ಕರುಣದಿಂದಲಿ ನೋಡು
ದೊರೆ ವಿಜಯವಿಠಲ ಪುರಂದರ ಪ್ರಿಯ [೩]


viThala vimala SIla bAlagOpAla
diTTamUruti SrIlOla [pa]
aTTuva KaLarede kuTTi keDahi mati gOTTu salaho
jagajaTTi PaMDarIrAya [a pa]

yaduvaMSOdBava kESava EkAmEva
madhuvairi mahAvaiBava
sadamalAnaMda BAva
matkuladaiva hRudayAbja ina bAMdhava
vidhinadipita nAradamuni sannuta
kadana karkaSa vAridaniBaga
pAdO pAdige saMpadavanu bayasuva
mRudumanadalli nillo padumiNi vallaBa [1]

nutisAra dEva pArthiva nitya praBAva
patita pAvana surajIva
atiSaya lIlA mAnava nara kaMThIrava
cyuta dUranAdi gurugOva
ratipati pita Satakratusuta sArathi
tutisuve gatipatha hitavAda tOru
mArutamata naMbida caturara saMgati
pratidinadali koDu satata prasanna [2]

SaraNu SaraNu sarveSa iTTigevAsa
duruLara saMga vinASa
pamapuruSha vilAsa niravakASa
varaprada pUrNa prakASa
more hokkenu ninna caraNa sarasijava
hariyennoLagiddu marave kaLedu ninna
smaraNe mADuvaMte karuNadiMdali nODu
dore vijayaviThala puraMdara priya [3]

Leave a Reply

You might also like

error: Content is protected !!